ಪರೇಶ್‌ ಹತ್ಯೆ ಕುರಿತು ಏನ್‌ ಹೇಳ್ತೀರಿ ಪ್ರಕಾಶ್ ರೈ ? : purposefully -asking ಪ್ರಥಮ್‌

ಬೆಂಗಳೂರು : ಪತ್ರಕರ್ತೆ ಗೌರಿ ಹತ್ಯೆ ವಿಚರವಾಗಿ ಮೋದಿ ನನಗಿಂತ ದೊಡ್ಡ ನಟ ಎಂದಿದ್ದಲ್ಲದೆ, ಅನೇಕ ವಿಚಾರಗಳಿಂದಾಗಿ ವಿವಾದದ ಕೇಂದ್ರ ಬಿಂದುವಾಗಿದ್ದ ನಟ ಪ್ರಕಾಶ್‌ ರೈ ಅವರಿಗೆ ಬಿಗ್‌ಬಾಸ್‌ ಸಸನ್‌ 4ರ ವಿನ್ನರ್‌ ಪ್ರಥಮ್ ಬಹಿರಂಗ ಸವಾಲು ಹಾಕಿದ್ದಾರೆ.

ಕೆಲ ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಕೋಮುಗಲಭೆಯಲ್ಲಿ ಕಾಣೆಯಾಗಿದ್ದ ಪರೇಶ್‌ ಮೇಸ್ತ ಮೃತದೇಹ ಕೆರೆಯಲ್ಲಿ ಪತ್ತೆಯಾಗಿತ್ತು. ಈ ಕುರಿತು ಪ್ರಥಮ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಬರೆದುಕೊಂಡಿದ್ದು, ತಮಗೆ ತಾವೇ ಹೇಳಿಕೊಳ್ಳುವಂತೆ ದೊಡ್ಡ ನಟ ಪ್ರಕಾಶ್‌ ರೈ ಅವರಿಗೆ ಬಹಿರಂಗ ಪ್ರಶ್ನೆ. ಏನ್ರೀ ಪ್ರಕಾಶ್‌ ರಾಜ್‌, ಸೋ ಕಾಲ್ಡ್‌ ದೊಡ್ಡ ನಟ ? ಅವತ್ತು ಗೌರಿ ಲಂಕೇಶ್‌ ಹತ್ಯೆಯಾದಾಗ ಈ ದೇಶದಲ್ಲಿ ಏನಾಗ್ತಿದೆ ? ಅದು -ಇದು  ಅಂತ ಬಾಯಿಗೆ ಬಂದಂತೆ ಕೇಳಿ ಕೊನೆಗೆ #just-asking ಅಂತಿದ್ರಿ…ಇವತ್ತು ಪರೇಶ‌ ಮೇಸ್ತಾ ವಿಕೃತ ರೀತಿಯಲ್ಲಿ ಹತ್ಯೆಯಾಗಿದೆ. ಈ ರಾಜ್ಯದಲ್ಲಿ ಏನಾಗ್ತಿದೆ ಅಂತ ಈಗ ಕೇಳಲ್ವ ಸೋ ಕಾಲ್ಡ್‌ ದೊಡ್ಡ ನಟ (ಭಯಂಕರ)? ನರಕ ಅಂದ್ರೆ ಏನು ಅಂತ ಸಾಯೋಕು ಮುಂಚೆ ತೋರ್ಸಿದ್ದಾರೆ ಆ ನಾಯಿಗಳು. ಎಲ್ಲರಿಗೂ ಒಂದೇ ನ್ಯಾಯ ಇರಬೇಕು ಅಲ್ವೇನ್ರೀ ರೈ ?.ಹೊನ್ನಾವರದಲ್ಲಿ ಏನು ನಡೀತು ಅಂತ ಗೊತ್ತೇ ಇಲ್ವ ನಿಮಗೆ ? ನಾನು ಹಿಂದೂ- ಮುಸ್ಲಿಂ ಅಂತ ಮಾತಾಡುತ್ತಿಲ್ಲ. ಮಾನವೀಯತೆ, ಮನುಷ್ಯತ್ವದ ಬಗ್ಗೆ  ಮಾತನಾಡುತ್ತಿದ್ದೇನೆ. ಇದು ಬರಿ just asking ಅಲ್ಲ. #purposefully -asking ಎಂದು ಪೋಸ್ಟ್‌ ಮಾಡಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com