ನಿಮ್ಮ ದೇಶದ ಚುನಾವಣೆ ಮಧ್ಯೆ ನಮ್ಮನ್ನು ಎಳೆದು ತರಬೇಡಿ : ಮೋದಿಗೆ ಪಾಕ್‌ ತಿರುಗೇಟು

ಅಹಮದಾಬಾದ್ : ಗುಜರಾತ್‌ ವಿಧಾನಸಭಾ ಚುನಾವಣೆಯಲ್ಲಿ ಪಾಕಿಸ್ತಾನ ಹಸ್ತಕ್ಷೇಪ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಅವರ ಆರೋಪಕ್ಕೆ ಪಾಕಿಸ್ತಾನ ತಿರುಗೇಟು ನೀಡಿದ್ದು, ಭಾರತದ ಚುನಾವಣೆಯಲ್ಲಿ ವಿನಾಕಾರಣ ನಮ್ಮನ್ನು ಎಳೆದು ತರಬೇಡಿ. ನಿಮ್ಮ ಸ್ವಸಾಮರ್ಥ್ಯದಿಂದ ಗೆಲ್ಲಿ ಎಂದು ಹೇಳಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಪಾಕ್‌ ವಿದೇಶಾಂಗ ಸಚಿವಾಲಯದ ವಕ್ತಾರ ಮಹಮ್ಮದ್‌ ಫೈಸಲ್‌, ಪಾಕಿಸ್ತಾನದ ವಿರುದ್ದ ಬೇಜವಾಬ್ದಾರಿಯುತ ಹಾಗೂ ಆಧಾರ ರಹಿತ ಆರೋಪ ಮಾಡುವುದನ್ನು ನಿಲ್ಲಿಸಿ. ನಿಮ್ಮ ಸಾಮರ್ಥ್ಯದ ಮೇಲೆ ನೀವು ಚುನಾವಣೆ ಗೆಲ್ಲಿ ಎಂದಿದ್ದಾರೆ.

ಭಾನುವಾರ ಗುಜರಾತ್ ಚುನಾವಣೆಯ ಎರಡನೇ ಹಂತದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಗುಜರಾತ್‌ ಚುನಾವಣೆಯಲ್ಲಿ ಪಾಕಿಸ್ತಾನ ಹಸ್ತಕ್ಷೇಪ ಮಾಡುತ್ತಿದೆ. ಕಾಂಗ್ರೆಸ್‌ ಹಿರಿಯ ಮುಖಂಡರು ಪಾಕ್‌ ಮುಖಂಡರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ ಎಂದು ಆರೋಪಿಸಿದ್ದು, ಈ ಕುರಿತು ಕಾಂಗ್ರೆಸ್‌ ಸ್ಪಷ್ಟನೆ ನೀಡುವಂತೆ ಆಗ್ರಹಿಸಿದ್ದರು.

Leave a Reply

Your email address will not be published.