ಮದುವೆಯ ಬಳಿಕ ಎಮ್ಮೆ ಮೇಯಿಸುತ್ತಿದ್ದಾರಂತೆ ಸಮಂತಾ……ಹಿಂಗ್ಯಾಕಾಯ್ತು…?

ಕೆಲ ತಿಂಗಳ ಹಿಂದಷ್ಟೇ ನಾಗ ಚೈತನ್ಯ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನಟಿ ಸಮಂತಾ ಈಗ ಎಮ್ಮೆ ಮೇಯಿಸುತ್ತಿದ್ದಾರೆ. ಇದೇನಿದು ಸಮಂತಾ ಎಮ್ಮೆ ಮೇಯಿಸುತ್ತಿದ್ದಾರೆ ಎಂದು ಗಾಬರಿಯಾಗಬೇಡಿ. ಎಮ್ಮೆ ಮೇಯಿಸುತ್ತಿರುವುದು ಸಿನಿಮಾದಲ್ಲಿ.

ತೆಲುಗಿನ ರಂಗಸ್ಥಲಂ ಎಂಬ ಸಿನಿಮಾದಲ್ಲಿ ಸಮಂತಾ ಎಮ್ಮೆ ಮೇಯಿಸುತ್ತಿರುವ ಫೋಟೋ ವೈರಲ್ ಆಗಿದೆ. ಸದ್ಯ ಸಿನಿಮಾದ ಶೂಟಿಂಗ್‌ ಕೊನೆಯ ಹಂತದಲ್ಲಿದ್ದು, ಪ್ರಚಾರ ಕೆಲಸ ನಡೆಯುತ್ತಿದೆ. ಸಿನಿಮಾದಲ್ಲಿ ರಾಮ್‌ ಚರಣ್‌ ಸಮಂತಾ ಜೊತೆ ಅಭಿನಯಿಸುತ್ತಿದ್ದಾರೆ. ಈ ಸಿನಿಮಾಗೆ ಸುಕುಮಾರ್‌ ನಿರ್ದೇಶನವಿದ್ದು, ಸಿನಿಮಾದ ಫಸ್ಟ್‌ ಲುಕ್‌ಸಹ ಬಿಡುಗಡೆಯಾಗಿದೆ.

45 ಕೋಟಿ ರೂ ಬಜೆಟ್‌ನಲ್ಲಿ ಸಿನಿಮಾ ಮೂಡಿಬರುತ್ತಿದ್ದು, ಸಿನಿಮಾಗೆ ದೇವಿಶ್ರೀ ಅವರ ಸಂಗೀತವಿದೆ. ಈ ಚಿತ್ರದಲ್ಲಿ ಸಮಂತಾ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

Leave a Reply

Your email address will not be published.

Social Media Auto Publish Powered By : XYZScripts.com