‘ ಸಮಾಜದ ಋಣ ತೀರಿಸಲು ಹೋರಾಟ ಮಾಡುತ್ತಿದ್ದೇವೆ ‘ : ವಿನಯ್ ಕುಲಕರ್ಣಿ

ವಿಜಯಪುರ : ಲಿಂಗಾಯತ ಸಮಾವೇಶದಲ್ಲಿ ಸಚಿವ ವಿನಯ ಕುಲಕರ್ಣಿ ಭಾಷಣ ಮಾಡಿದರು. ‘ ನಮ್ಮ ಹೋರಾಟ ಯಾವುದೇ ಸಮುದಾಯ, ಪಕ್ಷದ ವಿರುದ್ಧ ಅಲ್ಲ. ನಮ್ಮ ಹೋರಾಟ ನಮ್ಮ ಹಕ್ಕು ಪಡೆಯಲು ಮಾತ್ರ. ಬಂಧುಗಳೆ ಎಲ್ಲಾ ಒಳ ಪಂಗಡಗಳಿಂದ ನಮ್ಮ ಸಮಾಜ ಒಂದಾಗಿದ್ದೇವೆ. ಗೆಲ್ಲುವವರೆಗೂ ಕೈ ಮೇಲೆ ಮಾಡಿ ಹೋರಾಡುವ ನಮ್ಮ ಸಂಕಲ್ಪ ನಿಲ್ಲುವುದಿಲ್ಲ.

ಇವತ್ತು ಲಿಂಗಾಯತ ಧರ್ಮದ ಹೋರಾಟ ಮಾಡುವ ಮೂಲಕ ಗಿಡ ನೆಡುತ್ತಿದ್ದೇವೆ. ನಾಳೆ ಮರವಾಗಿ ಹಣ್ಣು ಕೊಡುವಾಗ ಹಣ್ಣು ತಿನ್ನಲು ಎಲ್ಲರೂ ಬರುತ್ತಾರೆ. ಭೂಮಿ ಮೇಲೆ ಹುಟ್ಟಿದ ಮೇಲೆ ಮೂರು ಋಣ ತೀರಿಸಬೇಕಾಗುತ್ತದೆ. ಒಂದು ತಾಯಿ ಋಣ, ಎರಡು ಭೂಮಿ ರುಣ, ಮೂರನೆಯದಾಗಿ ಸಮಾಜದ ರುಣ ತೀರಿಸಬೇಕಾಗುತ್ತದೆ.

ಇಂದು ನಾವು ಸಮಾಜದ ಋಣ ತೀರಿಸಲು ಹೋರಾಟ ಮಾಡುತ್ತಿದ್ದೇವೆ. ಹೊರಗಿನ ಎಲ್ಲ ಸಮಾಜದ ಬೆಂಬಲ ನಮಗಿದೆ, ಆದ್ರೆ ನಮ್ಮವರೆ ನಮಗೆ ಅಡ್ಡಿಯಾಗಿದ್ದಾರೆ. ಸ್ವಾಮೀಜಿಗಳಿಗೆ ವಿನಂತಿ ಮಾಡಿಕೊಳ್ತೇನೆ ಷಡ್ಯಂತ್ರ ಬಿಟ್ಟು ಬನ್ನಿ ನಮ್ಮ ಜೊತೆ. ನಿಮ್ಮೆಲ್ಲರ ಆಸೆ, ನಮ್ಮೆಲ್ಲರ ಕೂಗು ಎಲ್ಲರಿಗೂ ಮುಟ್ಟಿ ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸಿಗುವ ಕೆಲಸವಾಗಲಿ ‘ ಎಂದರು.

Leave a Reply

Your email address will not be published.

Social Media Auto Publish Powered By : XYZScripts.com