Cricket : 112 ಕ್ಕೆ ಆಲೌಟ್ ಆದ ಭಾರತ : ಲಂಕಾಗೆ ಸುಲಭ ಜಯ

ಧರ್ಮಶಾಲಾದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ಭಾರತದ ವಿರುದ್ಧ 7 ವಿಕೆಟ್ ಜಯ ಸಾಧಿಸಿದೆ. ಟಾಸ್ ಗೆದ್ದ ಲಂಕಾ ಮೊದಲು ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಭಾರತ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿ 112 ಕ್ಕೆ ಆಲೌಟ್ ಆಯಿತು. ಮಾರಕ ದಾಳಿ ನಡೆಸಿದ ಸುರಂಗಾ ಲಕ್ಮಲ್ 4 ವಿಕೆಟ್ ಪಡೆದರು.

ಭಾರತದ ಮೇಲಿನ ಕ್ರಮಾಂಕದ ಪ್ರಮುಖ 5 ಬ್ಯಾಟ್ಸಮನ್ ಗಳು ಎರಡಂಕಿಯನ್ನೂ ತಲುಪದೇ ಪೆವಿಲಿಯನ್ ಗೆ ಮರಳಿದರು. ಆರಂಭಿಕ ಬ್ಯಾಟ್ಸಮನ್ ಶಿಖರ್ ಧವನ್ ಹಾಗೂ ದಿನೇಶ್ ಕಾರ್ತಿಕ್ ಶೂನ್ಯಕ್ಕೆ ಔಟಾದರು.

Image result for sri lanka won dharamshala

ಒಂದು ಹಂತದಲ್ಲಿ ಭಾರತ 29 ಕ್ಕೆ 7 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ ಜೊತೆಯಾದ ಧೋನಿ ಹಾಗೂ ಕುಲದೀಪ್ ಯಾದವ್ 41 ರನ್ ಜೊತೆಯಾಟವಾಡಿದರು. ಟೀಮ್ ಇಂಡಿಯಾ ಪರವಾಗಿ ಎಮ್ ಎಸ್ ಧೋನಿ ಗರಿಷ್ಟ 65 ರನ್ ಗಳಿಸಿದರು.

Image result for sri lanka won dharamshala dhoni

ಗುರಿಯನ್ನು ಬೆನ್ನತ್ತಿದ ಲಂಕಾ 20.4 ಓವರುಗಳಲ್ಲಿ 3 ವಿಕೆಟ್ ಕಳೆದುಕೊಂಡು 114 ರನ್ ಗಳಿಸಿ ಮೊದಲ ಪಂದ್ಯವನ್ನು ಜಯಿಸಿತು. ಲಂಕಾ ಪರವಾಗಿ ಉಪುಲ್ ತರಂಗಾ 49,  ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ ಲಂಕಾ 1-0 ಮುನ್ನಡೆ ಸಾಧಿಸಿದೆ.

Leave a Reply

Your email address will not be published.

Social Media Auto Publish Powered By : XYZScripts.com