ಭಾರತ ರತ್ನ ಪ್ರಶಸ್ತಿಗೆ ಮಾಜಿ CM ನಿಜಲಿಂಗಪ್ಪನವರ ಹೆಸರು ಶಿಫಾರಸ್ಸು – CM ಸಿದ್ದರಾಮಯ್ಯ

ವಿಧಾನಸೌಧ ಮುಂಬಾಗದ ನಿಜಲಿಂಗಪ್ಪ ಪುತ್ಥಳಿಗೆ  ಪುಷ್ಪಾರ್ಚನೆ ಮಾಡಿದ ನಂತರ ಮಾತನಾಡಿದ CM ಸಿದ್ದರಾಮಯ್ಯ ಭಾರತ ರತ್ನ ಪ್ರಶಸ್ತಿಗೆ ಅವರ ಹೆಸರನ್ನು ಶಿಫಾರಸ್ಸು ಮಾಡುವುದಾಗಿ ಹೇಳಿದರು. ನಿಜಲಿಂಗಪ್ಪನದರು ರಾಜ್ಯ ಮತ್ತು ದೇಶ ಕಂಡ ಅಪ್ರತಿಮ ನಾಯಕ,  ಕೈ ಬಾಯಿ ಶುದ್ಧವಾಗಿಟ್ಟುಕೊಂಡಿದ್ದ ಜನ ನಾಯಕ ಜಪತೆಗೆ ನೀರಾವರಿ ಕ್ಷೇತ್ರದಲ್ಲಿ ನಿಜಲಿಂಗಪ್ಪನವರ ಕೊಡುಗೆ ಅಪಾರ ಎಂದು CM ಸಿದ್ದರಾಮಯ್ಯ ಸ್ಮರಿಸಿದರು.
ದೇಶದಲ್ಲಿ ಅವರಿಗೆ ಇನ್ನಷ್ಟು ಉನ್ನತ ಸ್ಥಾನ ಸಿಗಬೇಕಿತ್ತು. ವಿಧಾನಸೌಧದ ಮುಂಭಾಗ ಇರುವ ಅವರ ಪ್ರತಿಮೆ ಅವರಿಗೆ ಹೋಲುತ್ತಿಲ್ಲ ಅಂತ ವಾಟಾಳ್ ನಾಗರಾಜ್ ಮನವಿ ಕೊಟ್ಟಿದ್ದಾರೆ,  ನಿಜಲಿಂಗಪ್ಪನವರು ಹೆಚ್ಚು ಕಚ್ಚೆ, ಪಂಚೆ ಧರಿಸುತ್ತಿದ್ರು. ದೆಹಲಿಗೆ ಹೋಗುವಾಗ ಮಾತ್ರ ಕೋಟು ಪ್ಯಾಂಟು ಹಾಕ್ತಿದ್ರು ಅಷ್ಟೆ. ಅವರ ಹೊಲಿಕೆ ಆಗ್ತಿಲ್ಲ. ಹೀಗಾಗಿ ಅವರ ಪ್ರತಿಮೆ ಬದಲಾಯಿಸುತ್ತೇವೆ. ಜಪತೆಗೆ ಸಂಸತ್ ಭವನದನ ಮುಂದೆಯೂ ನಿಜಲಿಂಗಪ್ಪನವರ ಪ್ರತಿಮೆ ಸ್ಥಾಪನೆಗೆ ಶಿಫಾರಸು ಮಾಡ್ತೇವೆ ಎಂದು CM ಸಿದ್ದರಾಮಯ್ಯ ಹೇಳಿದರು.
ಕಾರ್ಯಕ್ರಮದಲ್ಲಿ  ಮಾಜಿ ಕೇಂದ್ರ ಸಚಿವ ಎಂವಿ ರಾಜಶೇಖರನ್,  ವಾಟಾಳ್ ನಾಗರಾಜ್ , ಮೇಯರ್ ಸಂಪತ್ ರಾಜುಸೇರಿ ಹಲವು ಅಧಿಕಾರಿಗಳು ಭಾಗಿಯಾಗಿದ್ದರು. ಇದೇ ಸಂದರ್ಭದಲ್ಲಿ  ಮುಂಬೈನಲ್ಲಿ ಕನ್ನಡಿಗರು ಕನಕ ಜಯಂತಿ ಆಚರಣೆ ಮಾಡ್ತಿದ್ದಾರೆ ಅದಕ್ಕಾಗಿ ಮುಂಬೈಗೆ ಹೋಗುತ್ತಿದ್ದೇನೆ ಎಂದು CM ಸಿದ್ದರಾಮಯ್ಯ ತಿಳಿಸಿದರು.  3 ತಿಂಗಳಿಂದ ಕೇಳಿಕೊಂಡಿದ್ರು ಬರಬೇಕು ಅಂತ. ಮಂಡ್ಯ ಭಾಗದ ಜನರೇ ಅಲ್ಲಿ ಹೆಚ್ಚು ಇದ್ದಾರೆ  ಹೀಗಾಗಿ ಕನಕ ಜಯಂತಿ ಆಚರಣೆಗೆ ಹೋಗಿ ವಾಪಸ್ ಬರ್ತೀನಿ ಎಂದು ಅವರು ಹೇಳಿದರು.

Leave a Reply

Your email address will not be published.

Social Media Auto Publish Powered By : XYZScripts.com