ನದಿಯಲ್ಲಿ ಸಿಕ್ತು ಬುಮ್ರಾ ಅಜ್ಜನ ಶವ.! : ಮೊಮ್ಮಗನ ನೆನಪಲ್ಲಿ ಪ್ರಾಣಬಿಟ್ಟರೇ ಸಂತೋಖ್ ಸಿಂಗ್.?

ಗುಜರಾತ್ ರಾಜಧಾನಿ ಅಹಮದಾಬಾದ್ ನಲ್ಲಿನ ಸಾಬರಮತಿ ನದಿಯಲ್ಲಿ ಕ್ರಿಕೆಟರ್ ಜಸ್ಪ್ರೀತ್ ಬುಮ್ರಾ ಅಜ್ಜನ ಶವ ಪತ್ತೆಯಾಗಿದೆ. ಡಿಸೆಂಬರ್ 8 ರಂದು ಶುಕ್ರವಾರ ನಾಪತ್ತೆಯಾಗಿದ್ದ ಸಂತೋಖ್ ಸಿಂಗ್, ರವಿವಾರ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 84 ವರ್ಷದ ಸಂತೋಖ್ ಸಿಂಗ್ ನಾಪತ್ತೆಯಾದ ದಿನ ಪುತ್ರಿ ರಾಜಿಂದರ್ ಕೌರ್ ಪೋಲೀಸರಿಗೆ ದೂರು ನೀಡಿದ್ದರು.

ಮೊಮ್ಮಗ ಜಸ್ಪ್ರೀತ್ ನನ್ನು ಭೇಟಿಯಾಗಲು ಅವಕಾಶ ನೀಡದ್ದಕ್ಕೆ ಅತೀವವಾಗಿ ನೊಂದಿದ್ದರು ಎಂದು ರಾಜಿಂದರ್ ಕೌರ್ ಹೇಳಿಕೆ ನೀಡಿದ್ದಾರೆ. ‘ ಜಸ್ಪ್ರೀತ್ ಬುಮ್ರಾನ ತಾಯಿ ದಲ್ಜೀತ್ ಕೌರ್ ಬಳಿಗೆ ನಾವು ಹೋದಾಗ, ಬುಮ್ರಾನನ್ನು ಭೇಟಿಯಾಗಲು ಅವಕಾಶ ನೀಡಲಿಲ್ಲ. ಅಪ್ಪ ಜಸ್ಪ್ರೀತ್ ಜೊತೆ ಮಾತನಾಡಲು ಬಯಸಿದ್ದರು ಆದರೆ ಆಕೆ ಜಸ್ಪ್ರೀತ್ ಫೋನ್ ನಂಬರ್ ಸಹ ಕೊಡಲಿಲ್ಲ. ಇದರಿಂದ ಅಪ್ಪನಿಗೆ ತುಂಬ ನೊಂದಿದ್ದರು. ಶುಕ್ರವಾರ ಮಧ್ಯಾಹ್ನ ಮನೆ ಬಿಟ್ಟು ತೆರಳಿದ ಅಪ್ಪ ಮತ್ತೆ ಮರಳಲಿಲ್ಲ ‘ ಎಂದು ಪುತ್ರಿ ರಾಜಿಂದರ್ ಕೌರ್ ಹೇಳಿದ್ದಾರೆ.

ಜಸ್ಪ್ರೀತ್ ತಂದೆಯ ಮರಣದ ನಂತರ ಅಜ್ಜ ಸಂತೋಖ್ ಸಿಂಗ್, ಅಹಮದಾಬಾದ್ ನಿಂದ ಉತ್ತರಾಖಂಡ್ ಗೆ ತೆರಳಿದ್ದ ಸಂತೋಖ್ ಸಿಂಗ್ ಜೀವನ ನಿರ್ವಹಣೆಗಾಗಿ ಆಟೋ ರಿಕ್ಷಾ ಓಡಿಸುತ್ತಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com