Ranaji Trophy : ಮುಂಬೈಗೆ ಇನ್ನಿಂಗ್ಸ್ ಸೋಲು : ಸೆಮಿಫೈನಲ್ ಗೆ ಕರ್ನಾಟಕ

ನಾಗ್ಪುರದಲ್ಲಿ ನಡೆದ ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ಮುಂಬೈ ತಂಡದ ವಿರುದ್ಧ ಇನ್ನಿಂಗ್ಸ್ ಹಾಗೂ 20 ರನ್ ಜಯ ಗಳಿಸಿ ಸೆಮಿಫೈನಲ್ ತಲುಪಿದೆ. ನಾಲ್ಕನೇ ದಿನವಾದ ರವಿವಾರ ಮುಂಬೈ ತನ್ನ ಎರಡನೇ ಇನ್ನಿಂಗ್ಸ್ ನಲ್ಲಿ 377 ಕ್ಕೆ ಆಲೌಟ್ ಆಯಿತು. ಮುಂಬೈ ಪರವಾಗಿ ಶತಕ ಬಾರಿಸಿದ ಸೂರ್ಯಕುಮಾರ್ ಯಾದವ್ 108, ಅರ್ಧಶತಕ ಬಾರಿಸಿದ ಶಿವಮ್ ದೂಬೆ 71, ಆಕಾಶ್ ಪಾರ್ಕರ್ 65 ರನ್ ಗಳಿಸಿದರು.

ಕರ್ನಾಟಕದ ಪರವಾಗಿ ಮಾರಕ ದಾಳಿ ನಡೆಸಿದ ಕೃಷ್ಣಪ್ಪ ಗೌತಮ್ 6 ಹಾಗೂ ವಿನಯ್ ಕುಮಾರ್ 2, ಶ್ರೀನಾಥ್ ಅರವಿಂದ್ 1 ವಿಕೆಟ್ ಪಡೆದರು. ಮೊದಲ ಇನ್ನಿಂಗ್ಸ್ ನಲ್ಲಿ 397 ರನ್ ಹಿನ್ನಡೆಯಲ್ಲಿದ್ದ ಮುಂಬೈ 20 ರನ್ ಸೋಲನುಭವಿಸಿ ಟೂರ್ನಿಯಿಂದ ಹೊರಬಿದ್ದಿದೆ. ಪಂದ್ಯದಲ್ಲಿ 8 ವಿಕೆಟ್ ಪಡೆದ ನಾಯಕ ವಿನಯ್ ಕುಮಾರ್ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದರು.

 

Leave a Reply

Your email address will not be published.

Social Media Auto Publish Powered By : XYZScripts.com