ಲಿಂಗಾಯತ ಸ್ವತಂತ್ರ ಧರ್ಮವಾದರೆ ದೇಶಕ್ಕೆ ತೊಂದರೆಯಿಲ್ಲ : ನಿಜಗುಣಾನಂದ ಸ್ವಾಮೀಜಿ

ವಿಜಯಪುರ : ಲಿಂಗಾಯತ ಶಮಾವೇಶದಲ್ಲಿ ನಿಜಗುಣಾನಂದ ಸ್ವಾಮೀಜಿ ಭಾಷಣ ಮಾಡಿದರು. ಭಾರತದೇಶ, ಜೈ ಬಸವೇಶ. ಬೇಕೆ ಬೇಕು ಮಾನ್ಯತೆ ಬೇಕು ಎಂಬ ಘೋಷಣೆ ಕೂಗಿದರು. ‘ ಇಂದು ನಡೆಯುತ್ತಿರುವುದು ಸೆಮಿಫೈನಲ್ ಸಮಾವೇಶ. ಫೈನಲ್ ಸಮಾವೇಶ ಬೆಂಗಳೂರಿನಲ್ಲಿ ನಡೆಯಲಿದೆ.

ನಮ್ಮ ಧರ್ಮಗುರು ಬಸವಣ್ಣನವರು, ನಮ್ಮ ಧರ್ಮಗ್ರಂಥ ವಚನ ಸಾಹಿತ್ಯ. ಲಿಂಗಾಯತ ಸ್ವತಂತ್ರ ಧರ್ಮ ಆದ್ರೆ ಜಂಗಮ ಸಮುದಾಯಕ್ಕೆ ತೊಂದರೆಯಾಗುವುದಿಲ್ಲ. ಲಿಂಗಾಯತ ಸ್ವತಂತ್ರ ಧರ್ಮ ಆದ್ರೆ ದೇಶದಲ್ಲಿ ಯಾರಿಗೂ ಹಾನಿಯಿಲ್ಲ.

ಬಸವಣ್ಣನವರು ಧರ್ಮ ಸ್ಥಾಪನೆ ಮಾಡಿದ್ದು ಒಂದಿಗೂಡಿಸಲು, ಬೇರೆ ಮಾಡಲು ಅಲ್ಲ. ಹೋರಾಟ ನಿರಂತರವಾಗಿ ನಡೆಯಬೇಕಿದೆ. ಸಾತ್ವಿಕವಾಗಿ, ಸೈದ್ಧಾಂತಿಕವಾಗಿ ಹೋರಾಟ ಮಾಡಿದಾಗ ಮಾತ್ರ ನಾವು ಉಳಿಯಲು ಸಾಧ್ಯ. ಎಲ್ಲರೂ ಒಂದಾಗಿ ಬದುಕೋಣ, ಬಾಳೋಣ ‘ ಎಂದರು.

ವಿಜಯಪುರದಲ ಲಿಂಗಾಯತ ಸಮಾವೇಶದಲ್ಲಿ ‘ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್ ಹೇಳಿಕೆ ನೀಡಿದ್ದಾರೆ. ವಚನ ಸಾಹಿತ್ಯವೇ ನಮ್ಮ ಧರ್ಮಗ್ರಂಥ, ವಚನಗಳೆ ನಮ್ಮ ಆಚರಣೆಗಳು. ಲಿಂಗಾಯತರ ಮೂರನೆ ಪೀಳಿಗೆ ಯಾವ ರೀತಿಯಾಗಿ ಬದುಕುತ್ತಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನಮ್ಮ ನಡೆ ನುಡಿ ಒಂದಾಗಿ ಸನ್ಮಾರ್ಗದಲ್ಲಿ ನಡೆಯಬೇಕಾದ್ರೆ ನಮಗೆ ಲಿಂಗಾಯತ ಸ್ವತಂತ್ರ ಧರ್ಮದ ಅವಶ್ಯಕತೆ ಇದೆ ‘ ಎಂಧರು.

ಲಿಂಗಾಯತ ಸಮಾವೇಶದಲ್ಲಿ ಸಚಿವ ಎಂ ಬಿ ಪಾಟೀಲ್ ಭಾಷಣ ಮಾಡಿ ‘ 12ನೇ ಶತಮಾನದಲ್ಲಿ ಅಣ್ಣ ಬಸವಣ್ಣ ಹಾಗೂ ಅನೇಕ ಶರಣರು ಸೇರಿ ಬಸವ ಧರ್ಮ ಸ್ಥಾಪಿಸಿದ್ರು. ಜಗತ್ತಿನ ಪ್ರಥಮ ಪಾರ್ಲಿಮೆಂಟ್ ಅದು ಅನುಭವ ಮಂಟಪ, ವಚನ ಸಾಹಿತ್ಯ ನಮ್ಮ ಧರ್ಮಗ್ರಂಥ. ಬಸವ ಧರ್ಮ ವಿಶ್ವ ಮಾನವ ದರ್ಮ ಆಗಬೇಕಿದ್ದ ಅವಕಾಶವನ್ನು ನಾವು ಕಳೆದುಕೊಂಡಿದ್ದೇವೆ.

ಇವತ್ತು ಸತ್ಯ ಮತ್ತು ಅಸತ್ಯಗಳ ಮಧ್ಯೆ ಹೋರಾಟ ನಡೆಯುತ್ತಿದೆ. ಕೆಲವರು ತಮ್ಮ ಸ್ವಾರ್ಥದ ಸಲುವಾಗಿ ಬಸವ ಧರ್ಮವನ್ನು ತುಳಿಯಲಾಗಿದೆ. ಮಠಗಳು ಭಕ್ತರಿಗಾಗಿ ಇರಬೇಕು, ಆದ್ರೆ ಕೆಲವರು ತಮಗಾಗಿ ಭಕ್ತರನ್ನು ಮಾಡಿಕೊಂಡಿದ್ದಾರೆ ‘ ಎಂದರು.

Leave a Reply

Your email address will not be published.

Social Media Auto Publish Powered By : XYZScripts.com