ಸಿನಿಮಾದಲ್ಲಿ ಮುತ್ತು ಕೊಡ್ತೀಯಾ, ನಂಗೆ ಕೊಡಲ್ವಾ.?ಮುತ್ತು ಕೊಡು ಅಂತ ನಾಯಕಿಯನ್ನ ಪೀಡಿಸಿದ ಅಭಿಮಾನಿ..!

ಕೆಲವೊಮ್ಮೆ ಸೆಲೆಬ್ರೆಟಿಗಳು ಅಭಿಮಾನಿಗಳಿಂದ ಚಿತ್ರವಿಚಿತ್ರ ಪ್ರಸಂಗಗಳನ್ನ ಎದುರಿಸಬೇಕಾಗುತ್ತೆ. ಬಹುಭಾಷಾ ನಟಿ ಅದಾ ಶರ್ಮಾಗೆ ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಇಂತದ್ದೇ ಕಹಿ ಅನುಭವ ಆಗಿದೆ. ವ್ಯಕ್ತಿಯೊಬ್ಬ ನಾನು ನಿನ್ನ ಅಭಿಮಾನಿ. ನೀನು ನನ್ನ ಮಗಳ ತರ ಇದ್ದೀಯ,  ನನಗೆ ಒಂದು ಮುತ್ತು ಕೊಡು ಅಂತ ಪೀಡಿಸಿದನಂತೆ. ಇದ್ದಕ್ಕಿದಂತೆ ವ್ಯಕ್ತಿಯೊಬ್ಬ ಹೀಗೆ ಕೇಳಿದ್ದು ಅದಾ ಶರ್ಮಾಗೆ ಶಾಕ್ ತಂದಿದೆ.
ಅಷ್ಟಕ್ಕೇ ಸುಮ್ಮನಾಗದೇ ನೀನು ಸಿನಿಮಾಗಳಲ್ಲಿ ಯಾರ್ಯಾರಿಗೊ ಮುತ್ತು ಕೊಡ್ತಿಯಾ, ನನಗೆ ಯಾಕೆ ಕೊಡಲ್ಲ ಅಂದಿದ್ದಾನೆ ಆತ. ಸುತ್ತ ನೆರದಿದ್ದ ಜನರಲ್ಲಿ ಕೆಲವರು ಇದನ್ನ ವೀಡಿಯೋ ಮಾಡಿತ್ತಿದ್ದರಂತೆ. ಮತ್ತೆ ಕೆಲವರು ಮುತ್ತು ಕೊಡು ಏನು ಆಗಲ್ಲ ಅಂತ ಕಿರುಚುತ್ತಿದ್ದರಂತೆ. ಅಲ್ಲಿಂದ ನಟಿ ಅದಾ ಹೇಗೊ ತಪ್ಪಿಸಿಕೊಂಡು ಬಂದಿದ್ದಾರೆ.
ವಿಮಾನ ನಿಲ್ದಾಣದಲ್ಲಿ ನಡೆದ ಘಟನೆ ಕುರಿತು ಅದಾ ಶರ್ಮಾ ಸಾಲು ಸಾಲು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಸಿನಿಮಾದಲ್ಲಿ ಮಾಡಿದ್ದನ್ನ ನಿಜ ಜೀವನದಲ್ಲಿ ಮಾಡೋಕೆ ಆಗುತ್ತಾ.? ಈ ರೀತಿ ಒಬ್ಬ ಯುವತಿಯನ್ನ ಪಬ್ಲಿಕ್ ಆಗಿ ಕೇಳೊದು ಎಷ್ಟು ಸರಿ. ಆ ರೀತಿ‌ ಕೆಟ್ಟದಾಗಿ ನಡೆದುಕೊಳ್ಳುವವರನ್ನ ಹುರಿದುಂಬಿಸೋ ಅಂಥಾ ಜನರಿಗೆ ಏನು ಹೇಳೊದು. ನನಗೂ ಪುರುಷರು ಅಂದ್ರೆ ಗೌರವ ಇದೆ.
ಆದ್ರೆ ಈ ರೀತಿ ಕೆಟ್ಟದಾಗಿ ವರ್ತಿಸುವವರಿಗೆ ಬುದ್ದಿ ಕಲಿಸೋಕೂ ಗೊತ್ತು ಅಂತ ಅದಾ ಶರ್ಮಾ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ. ಅದಾ ಶರ್ಮಾ, ಪುನೀತ್ ರಾಜ್ ಕುಮಾರ್ ಅಭಿನಯದ ರಣವಿಕ್ರಮ ಚಿತ್ರದಲ್ಲಿ ನಾಯಕಿಯಾಗಿ ಬಣ್ಣ ಹಚ್ಚಿದ್ದರು.

Leave a Reply

Your email address will not be published.