‘ ಗೌಡರಿಗೆ ವರುಣಾ ಕ್ಷೇತ್ರವೇ ಗೊತ್ತಿಲ್ಲ ‘ : ಸದಾನಂದಗೌಡರಿಗೆ ಟಾಂಗ್ ಕೊಟ್ಟ CM ಸಿದ್ದರಾಮಯ್ಯ

ವರುಣಾ ಕ್ಷೇತ್ರಕ್ಕೆ ನಾನು ಹೋಗಿದ್ದಕ್ಕೆ ಸಿಎಂ ಸಿದ್ದರಾಮಯ್ಯಗೆ ನಡುಕ ಶುರುವಾಗಿದೆ ಅನ್ನೊ ಕೇಂದ್ರ ಸಚಿವ ಸದಾನಂದಗೌಡ ಹೇಳಿಕೆಗೆ  CM ಸಿದ್ದರಾಮಯ್ಯ  ಸದಾನಂದಗೌಡರಿಗೆ ಟಾಂಗ್ ಕೊಟ್ಟಿದ್ದಾರೆ.
‘ ಸದಾನಂದಗೌಡರಿಗೆ ವರುಣಾ ಕ್ಷೇತ್ರವೇ ಗೊತ್ತಿಲ್ಲ.  ಸುಮ್ಮನೆ‌ ಏನೇನೋ ಮಾತಾಡ್ತಾರೆ.  ನಾನು ಈ ಬಾರಿ ಅಲ್ಲಿ‌ ಚುನಾವಣೆಗೆ ನಿಲ್ಲುತ್ತಿಲ್ಲ ಅಂತುನು ಅವರಿಗೆ ಗೊತ್ತಿಲ್ಲಾ. ಈ ಬಾರಿ ನನ್ನ ಮಗ ಅಲ್ಲಿ ಸ್ಪರ್ಧಿಸುತ್ತಾನೆ. ನನ್ನ ಮಗನ ವಿರುದ್ದ ಸದಾನಂದಗೌಡ ನಿಲ್ಲಲಿ ‘  ಎಂದು ಸವಾಲು ಎಸೆದಿದ್ದಾರೆ.
ಕಳೆದ ಬಾರಿ 32 ಸಾವಿರ ಓಟ್ ಗಳಿಂದ ಗೆದ್ದಿದ್ದೆ.  ಬಿಜೆಪಿ ಅಲ್ಲಿ ಗೆಲ್ಲೋಕೆ ಸಾಧ್ಯಾನಾ? ಅಷ್ಟು ಸುಲಭನಾ?  ಅವರಿಗೆ ಇನ್ಚಾರ್ಜ್ ಕೊಟ್ಟರೆ ಎಲ್ಲ ಜನ ಬದಲಾವಣೆ ಆಗುತ್ತಾ? ನಾನು ಯಾರಿಗೂ ಭಯ ಬಿಳೊಲ್ಲ. ಸುಮ್ಮನೆ ಭಾಷಣ ಬಿಗಿಯೋದು ಅಲ್ಲ. ಬಂದು ಸದಾನಂದಗೌಡರೇ ಸ್ಪರ್ಧೆ ಮಾಡಲಿ ಎಂದ   CM ಸಿದ್ದರಾಮಯ್ಯ
ಬೇರೆಯವರನ್ನ ನಿಲ್ಲಿಸಿ ಬಲಿಕೊಡೋದಕ್ಕಿಂತ ಸದಾನಂದಗೌಡರೇ ವರುಣಾ ಕೇತ್ರದಿಂದ ನಿಲ್ಲಲಿ ಎಂದು ಸವಾಲು ಹೆಕಿದ್ದಾರೆ.

Leave a Reply

Your email address will not be published.