Watch : ವಿಮಾನದಲ್ಲಿ ‘ದಂಗಲ್’ ನಟಿಗೆ ಲೈಂಗಿಕ ಕಿರುಕುಳ : ಕಣ್ಣೀರಿಟ್ಟ ಜಾಯಿರಾ ವಾಸಿಮ್..!

‘ ದಂಗಲ್ ‘ ಚಿತ್ರದಲ್ಲಿ ಅಭಿನಯಿಸಿದ್ದ ನಟಿ ಜಾಯಿರಾ ವಾಸಿಮ್ ಗೆ ವಿಮಾನದಲ್ಲಿ ಲೈಂಗಿಕ ಕಿರುಕುಳ ನೀಡಲಾಗಿದೆ. 17 ವರ್ಷದ ಜಾಯಿರಾ ದೆಹಲಿಯಿಂದ ಮುಂಬೈಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ.

ವಿಮಾನದಲ್ಲಿ ಜಾಯಿರಾ ಹಿಂಬದಿ ಸೀಟಿನಲ್ಲಿ ಕೂತಿದ್ದ ವ್ಯಕ್ತಿಯೊಬ್ಬ, ತನ್ನ ಪಾದಗಳಿಂದ ನಟಿಯ ಬೆನ್ನಿಗೆ ಉಜ್ಜಿದ್ದಾನೆ. ಆತನ ಕೃತ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವ ಪ್ರಯತ್ನ ಮಾಡಿದರಾದರೂ, ಮಂದ ಬೆಳಕಿನ ಕಾರಣ ಸಾಧ್ಯವಾಗಿಲ್ಲ.

Image result for zaira wasim molested

ಈ ಘಟನೆಯ ತೀವ್ರ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಜಾಯಿರಾ, ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಕಣ್ಣೀರು ಹಾಕಿರುವ ಜಾಯಿರಾ ‘ ಹೀಗೆಲ್ಲ ಮಾಡಬಾರದು, ಇದು ಸರಿಯಲ್ಲ. ಇದು ಹುಡುಗಿಯರೊಂದಿಗೆ ವರ್ತಿಸುವ ಸರಿಯಾದ ಕ್ರಮವಲ್ಲ. ನಮಗೆ ನಾವೇ ಸಹಾಯ ಮಾಡಿಕೊಳ್ಳಲು ನಿರ್ಧರಿಸುವ ತನಕ ಯಾರೂ ನಮ್ಮ ನೆರವಿಗೆ ಬರುವುದಿಲ್ಲ. ಇದು ಅತ್ಯಂತ ಕೆಟ್ಟ ಅನುಭವ ‘ ಎಂದು ಹೇಳಿದ್ದಾರೆ.

Leave a Reply

Your email address will not be published.