9 ವರ್ಷದಿಂದ ಕ್ರಿಕೆಟ್ ಆಡಿದ್ರೂ ಜನರಿಗೆ ನನ್ನ ಹೆಸರೇ ಗೊತ್ತಿಲ್ಲ : ಜಡ್ಡು ಹೀಗೆ ಹೇಳಿದ್ದೇಕೆ..?

ಟೀಮ್ ಇಂಡಿಯಾದ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ಅಭಿಮಾನಿಗಳ ಮೇಲೆ ಕೋಪಗೊಂಡಿದ್ದಾರೆ. ಅದಕ್ಕೆ ಕಾರಣವೂ ಇದೆ. ವಿಷಯ ಏನೆಂದರೆ ರವೀಂದ್ರ ಜಡೇಜಾ ಅವರನ್ನು ಅಭಿಮಾನಿಯೊಬ್ಬರು, ಮಾಜಿ ಕ್ರಿಕೆಟಿಗ ಅಜಯ್ ಜಡೇಜಾ ಅವರ ಹೆಸರಿನಿಂದ ಕರೆದಿದ್ದಾರೆ. ಇದರಿಂದ ಬೇಸರಗೊಂಡು, ಸಾಮಾಜಿಕ ಜಾಲತಾಣ ಟ್ವಿಟರಿನಲ್ಲಿ ತಮ್ಮ ಅಸಮಾಧಾನವನ್ನು ಜಡ್ಡು ಹೊರಹಾಕಿದ್ದಾರೆ.

ಟ್ವೀಟ್ ಮಾಡಿರುವ ರವೀಂದ್ರ ಜಡೇಜಾ ‘ ಯಾರೋ ಒಬ್ಬರು ನನ್ನ ಬಳಿ ಬಂದು, ವೆಲ್ ಬೌಲ್ಡ್ ಅಜಯ್, ಲಾಸ್ಟ್ ಮ್ಯಾಚಲ್ಲಿ ನೀನು ತುಂಬಾ ಚೆನ್ನಾಗಿ ಬೌಲಿಂಗ್ ಮಾಡಿದೆ ಎಂದರು. 9 ವರ್ಷಗಳಿಂದ ಕ್ರಿಕೆಟ್ ಆಡುತ್ತಿದ್ದೇನೆ. ಆದರೂ ಜನರಿಗೆ ನನ್ನ ಹೆಸರು ಸರಿಯಾಗಿ ನೆನಪಿರುವುದಿಲ್ಲ ‘ ಎಂದು ಬರೆದುಕೊಂಡಿದ್ದಾರೆ.

ಆದರೆ, ಜಡ್ಡು ಕೋಪಕ್ಕೆ ತುಪ್ಪ ಸುರಿಯುವ ಕೆಲಸ ಮಾಡಿದ ಅಭಿಮಾನಿಗಳು ಉದ್ದೇಶಪೂರ್ವಕವಾಗಿ ಅಜಯ್ ಅಂತಲೇ ಕರೆದು ಕಾಲೆಳೆಯುವುದಕ್ಕೆ ಶುರುಮಾಡಿದ್ದಾರೆ.

Leave a Reply

Your email address will not be published.