Ranaji Trophy : ಸೋಲಿನ ಸುಳಿಯಲ್ಲಿ ಮುಂಬೈ : ಸೆಮಿಸ್ ನತ್ತ ಕರ್ನಾಟಕ

ನಾಗ್ಪುರದಲ್ಲಿ ಕರ್ನಾಟಕ ಹಾಗೂ ಮುಂಬೈ ತಂಡಗಳ ನಡುವೆ ನಡೆಯುತ್ತಿರುವ ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿನಯ್ ಕುಮಾರ್ ನೇತೃತ್ವದ ಕರ್ನಾಟಕ ತಂಡ ಗೆಲುವಿನತ್ತ ಸಾಗಿದೆ. ಸೆಮಿಫೈನಲ್ ತಲುಪಲು ಕರ್ನಾಟಕಕ್ಕೆ ಇನ್ನೂ 7 ವಿಕೆಟ್ ಪಡೆಯುವ ಅಗತ್ಯವಿದೆ.

ಅಮೋಘ ಶತಕ ಬಾರಿಸಿದ ಶ್ರೇಯಸ್ ಗೋಪಾಲ್ 150 ಹಾಗೂ ಕೆಳಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಶ್ರೀನಾಥ್ ಅರವಿಂದ್ 51 ರನ್ ನೆರವಿನಿಂದ ಕರ್ನಾಟಕ 570 ರನ್ ಬೃಹತ್ ಮೊತ್ತ ಕಲೆಹಾಕಿತು. ಮುಂಬೈ ಪರವಾಗಿ ಶಿವಮ್ ದೂಬೆ 5, ಶಿವಮ್ ಮಲ್ಹೋತ್ರಾ 3 ಹಾಗೂ ಧವಲ್ ಕುಲಕರ್ಣಿ 2 ವಿಕೆಟ್ ಪಡೆದರು.

ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಮುಂಬೈ 120 ಕ್ಕೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದು, 277 ರನ್ ಹಿನ್ನಡೆಯಲ್ಲಿದೆ. ಮೂರನೇ ದಿನದಾಟದ ಅಂತ್ಯಕ್ಕೆ ಮುಂಬೈ ಬ್ಯಾಟ್ಸಮನ್ ಗಳಾದ ಸೂರ್ಯಕುಮಾರ್ ಯಾದವ್ (55*) ಹಾಗೂ ಆಕಾಶ್ ಪಾರ್ಕರ್ (3*) ಅಜೇಯರಾಗುಳಿದಿದ್ದಾರೆ. ಕರ್ನಾಟಕದ ಪರವಾಗಿ ಗೌತಮ್ 2 ಹಾಗೂ ಶ್ರೀನಾಥ್ ಅರವಿಂದ್ 1 ವಿಕೆಟ್ ಪಡೆದರು.

 

 

Leave a Reply

Your email address will not be published.