‘ ಕಬಾಬ್ ಅಂಗಡಿ ಯಾವಾಗ ಓಪನ್ ಆಗುತ್ತೆ..?’ : ಮೋಯಿನ್ ಅಲಿಗೆ ಆಸೀ ಫ್ಯಾನ್ Racist ಪ್ರಶ್ನೆ.!

ಕಾಂಗರೂ ನಾಡಿನಲ್ಲಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಆ್ಯಶಸ್ ಟೆಸ್ಟ್ ಸರಣಿ ನಡೆಯುತ್ತಿದೆ. ಇಂಗ್ಲೆಂಡ್ ಕ್ರಿಕೆಟರ್ ಮೋಯಿನ್ ಅಲಿಗೆ ಆಸ್ಟ್ರೇಲಿಯಾ ಅಭಿಮಾನಿಯೊಬ್ಬ ಜನಾಂಗೀಯ ಟೀಕೆ ಮಾಡುವಂತಹ ವ್ಯಂಗ್ಯ ಪ್ರಶ್ನೆಯೊಂದನ್ನು ಕೇಳಿದ್ದಾನೆ. ಕಿಡಿಗೇಡಿ ಅಭಿಮಾನಿಯೊಬ್ಬ ಮೋಯಿನ್ ಅಲಿಗೆ ‘ ನಿಮ್ಮ ಕಬಾಬ್ ಅಂಗಡಿ ಎಷ್ಟು ಗಂಟೆಗೆ ಓಪನ್ ಆಗುತ್ತೆ ‘ ಎಂದು ಕೇಳಿದ್ದಾನೆ.

Image result for moeen ali kebab

ಈ ಪ್ರಕರಣದ ಬಗ್ಗೆ ಮಾತನಾಡಿರುವ ಮೋಯಿನ್ ಅಲಿ, ‘ ಯಾರೋ ಒಬ್ಬರು ನನಗೆ ಕಬಾಬ್ ಅಂಗಡಿ ಎಷ್ಟು ಗಂಟೆಗೆ ಓಪನ್ ಆಗುತ್ತೆ ಎಂದು ಕೇಳಿದರು. ಇಂತಹ ಮಾತುಗಳನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು.  ಕೆಲವೊಮ್ಮೆ ಪ್ರಶಂಸೆಯ ಮಾತುಗಳು, ಕೆಲವೊಮ್ಮೆ ನಿಂದನೆಯೂ ಕೇಳಿ ಬರುತ್ತದೆ. ಇವುಗಳನ್ನು ಲಘುವಾಗಿ ಪರಿಗಣಿಸಿ ಸುಮ್ಮನಾಗಿಬಿಡಬೇಕು ‘ ಎಂದು ಹೇಳಿದ್ದಾರೆ.

5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ, ಮೊದಲೆರಡು ಟೆಸ್ಟ್ ಸೋಲನುಭವಿಸಿರುವ ಪ್ರವಾಸೀ ಇಂಗ್ಲೆಂಡ್  ತಂಡ 0-2 ಹಿನ್ನಡೆಯಲ್ಲಿದೆ.

Leave a Reply

Your email address will not be published.

Social Media Auto Publish Powered By : XYZScripts.com