ನನ್ನ ಜೀವನದ ಪ್ರತೀಕ್ಷಣವೂ ಈ ದೇಶಕ್ಕೆ, 125 ಕೋಟಿ ಭಾರತೀಯರಿಗೆ ಅರ್ಪಣೆ : ಮೋದಿ

ದೆಹಲಿ : ಗುಜರಾತ್ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್‌ ವಿರುದ್ಧ ಮೋದಿ ಮತ್ತೆ ವಾಗ್ದಾಳಿ ನಡೆಸಿದ್ದಾರೆ. ಮುಸ್ಲೀಮರಿಗೆ ಮೀಸಲಾತಿ ಹೆಸರಿನಲ್ಲಿ ಸುಳ್ಳು ಭರವಸೆಗಳನ್ನು ಕಾಂಗ್ರೆಸ್‌ ನೀಡಿ ಮೋಸ ಮಾಡುತ್ತಿದೆ ಎಂದು ಕಿಡಿ ಕಾರಿದ್ದಾರೆ.

ಲುನವಾಡಾದಲ್ಲಿ ನಡೆದ ಚುನಾವಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ದೇಶದಲ್ಲಿ ಮುಸ್ಲೀಮರಿಗೆ ಮೀಸಲಾತಿ ನೀಡುವುದಾಗಿ ಕಾಂಗ್ರೆಸ್‌ ಸುಳ್ಳು ಭರವಸೆ ನೀಡಿದೆ. ಆದರೆ ಸದ್ಯ ಕಾಂಗ್ರೆಸ್‌ ಆಡಳಿತವಿರುವ ರಾಜ್ಯದಲ್ಲಿ ಮುಸ್ಲೀಮರಿಗೆ ಮೀಸಲಾತಿ ನೀಡಿಲ್ಲ.

ಇತ್ತೀಚೆಗಷ್ಟೇ ಕಾಂಗ್ರೆಸ್ ಮುಖಂಡ ಸಲ್ಮಾನ್‌ ನಿಜಾಮ್‌ ಅವರು, ರಾಹುಲ್‌ ಗಾಂಧಿ ದೇಶಕ್ಕಾಗಿ ಪ್ರಾಣ ಬಿಟ್ಟ ರಾಜೀವ್ ಗಾಂಧಿಯವರ ಪುತ್ರ, ಇಂದಿರಾ ಗಾಂಧಿಯವರ ಮೊಮ್ಮಗ….ಆದರೆ ಪ್ರಧಾನಿ ಯಾರ ಮಗ ಎಂದು ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿರುವ ಮೋದಿ, ನನ್ನನ್ನು ಪದೇ ಪದೇ ಹೀಯಾಳಿಸುವ ನನ್ನ ಬಡ ಕುಟುಂಬವನ್ನು ಅಣಕಿಸುವ, ನನ್ನ ಪಾಲಕರು ಯಾರೆಂದು ಕೇಳುವ ಎಲ್ಲಾ ಕಾಂಗ್ರೆಸ್‌ ನಾಯಕರಿಗೂ ನಾನು ಹೇಳುವುದಿಷ್ಟೇ, ಈ ದೇಶವೇ ನನಗೆ ಸರ್ವಸ್ವ, ನನ್ನ ಜೀವನದ ಪ್ರತೀ ಕ್ಷಣವೂ ಈ ದೇಶಕ್ಕೆ, 125 ಕೋಟಿ ಭಾರತೀಯರಿಗೆ ಸಮರ್ಪಿಸಿದ್ದೇನೆ ಎಂದಿದ್ದಾರೆ.

Leave a Reply

Your email address will not be published.