ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕೆ. ರತ್ನಪ್ರಭಾ

ಮಾಧ್ಯಮ ಪ್ರಕಟಣೆ : ಇಂದಿರಾ ಕ್ಯಾಂಟೀನ್ ನ ಯೋಜನೆಯಾದ ಕಡಿಮೆ ದರದಲ್ಲಿ ಉಪಾಹಾರ ಮತ್ತು ಭೋಜನ ನೀಡುವ ಇಂದಿರಾ ಕ್ಯಾಂಟೀನ್ ಆಹಾರದ ಗುಣಮಟ್ಟವನ್ನು ಪರೀಕ್ಷಿಸುವ ಸಲುವಾಗಿ ಇಂದು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಕೆ. ರತ್ನಪ್ರಭಾ ಅವರು ಇಂದಿರಾ ಕ್ಯಾಂಟೀನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮುಖ್ಯ ಕಾರ್ಯದರ್ಶಿ ಅವರೊಂದಿಗೆ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ಬಿಬಿಎಂಪಿ ಅಧಿಕಾರಿಗಳು ಕೆ.ಆರ್.ಮಾರುಕಟ್ಟೆಯ ಇಂದಿರಾ ಕ್ಯಾಂಟೀನ್‍ಗೆ ಭೇಟಿ ನೀಡಿ ಇಂದಿರಾ ಕ್ಯಾಂಟೀನ್ ಅನ್ನು ಪರಿಶೀಲಿಸಿದರು. ಸ್ವತಃ ತಾವು 10 ರೂ. ನೀಡಿ ಭೋಜನ ಪಡೆದು ಸವಿದರು. ಅಲ್ಲದೆ ಕ್ಯಾಂಟೀನ್‍ನಲ್ಲಿ ಆವರಣದಲ್ಲಿ ಕ್ಯೂ ನಿಂತವರೊಂದಿಗೆ ಸಂವಹನ ನಡೆಸಿದರು.

ಅಲ್ಲಿ ನೆರೆದಿದ್ದವರನ್ನು ಅವರ ಅನುಭವ ಹೇಗಿದೆ, ಮತ್ತೆ ಮತ್ತೆ ಇಂದಿರಾ ಕ್ಯಾಂಟೀನ್‍ಗೆ ಭೇಟಿ ನೀಡುತ್ತಾರಾ ಎಂದು ಕೇಳಿದರು. ನಿಯಮಿತವಾಗಿ ಆಹಾರ ಸೇವಿಸುತ್ತಾರಾ? ರುಚಿ ಹೇಗಿದೆ? ಅಲ್ಲದೆ ಪೂರೈಸುವ ಆಹಾರ ಬಿಬಿಎಂಪಿ ಮಾನದಂಡಗಳಿಗೆ ಅನುಗುಣವಾಗಿದೆಯೇ ಎಂದು ಪ್ರಶ್ನಿಸಿ ಅಲ್ಲಿ ನೆರೆದಿದ್ದವರ ಉತ್ತರ ಪಡೆದರು. ಮತ್ತು ಕ್ಯಾಂಟೀನ್ ಅಥವಾ ಆಹಾರ ಕುರಿತಂತೆ ಯಾವುದಾದರೂ ದೂರುಗಳಿವೆಯೇ ಎಂದು ಪರಿಶೀಲಿಸಿದರು.
ನಾಗರಿಕರು ಇಂದಿರಾ ಕ್ಯಾಂಟೀನ್ ಮೆನುವಿಗೆ ಮತ್ತಷ್ಟು ತಿನಿಸುಗಳನ್ನು ಸೇರಿಸಲು ಸಲಹೆ ಮಾಡಿದರು. ಸುತ್ತಮುತ್ತಲಿನ ಹೋಟೆಲ್‍ಗಳಿಗಿಂತ ಇಂದಿರಾ ಕ್ಯಾಂಟೀನ್‍ನಲ್ಲಿ ಬಹಳ ಕಡಿಮೆ ದರದಲ್ಲಿ ಆಹಾರ ದೊರೆಯುತ್ತದೆ ಎಂದರು.
ಸಿಬ್ಬಂದಿಯ ಕೆಲಸದ ಸಮಯ ಮತ್ತು ಅವರನ್ನು ಗುತ್ತಿಗೆದಾರರು ಸರಿಯಾಗಿ ನಡೆಸಿಕೊಳ್ಳುತ್ತಿರುವರಾ ಎಂದು ಅಧಿಕಾರಿಗಳು ವಿಚಾರಿಸಿದರು.

ಈ ಸಂದರ್ಭದಲ್ಲಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಉಪಸ್ಥಿತರಿದ್ದರು. ನಂತರ ಅವರು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಆಹಾರ ಪೂರೈಸುತ್ತಿರುವ ಎಸ್.ಪಿ.ರಸ್ತೆಯ ಅಡುಗೆಮನೆಗೂ ಭೇಟಿ ನೀಡಿದರು. ಅಡುಗೆಗೆ ವಿತರಣೆಗೆ ಬಳಸುತ್ತಿರುವ ಪಾತ್ರೆಗಳು, ಆವರಣದ ಸ್ವಚ್ಛತೆ ಕುರಿತು ಪರಿಶೀಲಿಸಿದ ನಂತರ ಪಾತ್ರೆಗಳು ಸ್ವಚ್ಛಗೊಳಿಸುತ್ತಿರುವ ಆವರಣಕ್ಕೂ ಭೇಟಿ ನೀಡಿದರು.
`ಈ ಭೇಟಿ ನನಗೆ ಬಹಳ ಸಂತೃಪ್ತಿ ತಂದಿದೆ. ಎಲ್ಲ ಸಲಹೆಗಳನ್ನೂ ಮೆನುವಿನಲ್ಲಿ ಸುಧಾರಣೆಯನ್ನು ನಾನು ದಾಖಲಿಸಿಕೊಂಡಿದ್ದೇನೆ. ಸರ್ಕಾರ ಅಡುಗೆಮನೆಗಳ ಸಾಮಥ್ರ್ಯವನ್ನು ಹೆಚ್ಚಿಸಲು ಮತ್ತು ಬೇಡಿಕೆ ಹೆಚ್ಚಿದಂತೆ ಇಂದಿರಾ ಕ್ಯಾಂಟೀನ್‍ಗಳಲ್ಲಿ ಪೂರೈಸುವ ಊಟಗಳ ಸಂಖ್ಯೆಯನ್ನು ಹೆಚ್ಚಿಸಲಿದ್ದೇವೆ’ ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ಶ್ರೀಮತಿ ಕೆ.ರತ್ನಪ್ರಭಾ ರವರು  ಹೇಳಿದರು.

Leave a Reply

Your email address will not be published.

Social Media Auto Publish Powered By : XYZScripts.com