KPJP ಪಕ್ಷಕ್ಕೆ ಸಿಕ್ತು ಅಧಿಕೃತ ಚಿಹ್ನೆ : ‘ಆಟೋ ರಿಕ್ಷಾ’ ಏರಿದ ರಿಯಲ್‌ಸ್ಟಾರ್‌ ಉಪೇಂದ್ರ

ಹುಬ್ಬಳ್ಳಿ : ನಟ ಉಪೇಂದ್ರ ಅವರ ಕೆಪಿಜೆಪಿ ಪಕ್ಷಕ್ಕೆ ಅಧಿಕೃತ ಚಿಹ್ನೆಯಾಗಿ “ಆಟೋರಿಕ್ಷಾ” ಸಿಕ್ಕಿದ್ದು ಈ ಕುರಿತು ಉಪೇಂದ್ರ ಅವರು ಘೋಷಣೆ ಮಾಡಿದ್ದಾರೆ.

ಈ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿದ ಉಪೇಂದ್ರ, ಆಟೋರಿಕ್ಷಾ ನಮ್ಮ ಪಕ್ಷದ ಚಿಹ್ನೆಯಾಗಿ ಸಿಕ್ಕಿದೆ. ನಿಜಕ್ಕೂ ಇದು ಸಂತೋಷದ ವಿಷಯ. ಕನ್ನಡ ಅಭಿಮಾನಿಗಳ ನೆಚ್ಚಿನ ನಟ ಶಂಕರ್‌ನಾಗ್‌ ಅವರಿಗೆ ಇದನ್ನು ಅರ್ಪಿಸುತ್ತೇನೆ ಎಂದಿದ್ದಾರೆ.

ಶಂಕರ್‌ ನಾಗ್ ಸಹ ದೇಶಕ್ಕಾಗಿ ಅನೇಕ ಕನಸುಗಳನ್ನು ಕಂಡಿದ್ದರು. ಮೆಟ್ರೋ ನಿರ್ಮಾಣ, ನಂದಿ ಬೆಟ್ಟಕ್ಕೆ ರೋಪ್‌ ವೇ, ಈ ರೀತಿಯ ಕನಸುಗಳನ್ನು ಕಂಡಿದ್ದರು. ಅವರ ಆಟೋ ರಾಜ ಸಿನಿಮಾ ಮೂಲಕ ಎಲ್ಲರಿಗೂ ಪ್ರೇರಣೆ ನೀಡಿದ್ದರು. ಅವರ ಚಿಂತನೆಗಳಿಂದ ಸ್ಪೂರ್ತಿ ಪಡೆದ ನಾನು ಖಾಕಿ ಬಟ್ಟೆ ಧರಿಸಿದೆ. ಪಕ್ಷ ಸ್ಥಾಪಿಸಿದೆ ಎಂದಿದ್ದಾರೆ.

ಇದೇ ವೇಳೆ ಆಟೋ ರಿಕ್ಷಾ ಚಿಹ್ನೆ ಕುರಿತು ಮಾತನಾಡಿದ ಉಪೇಂದ್ರ, ಆಟೋ ಎಂಬ ಪದಕ್ಕೆ ವಿಶಾಲವಾದ ಅರ್ಥವಿದೆ. ನಮಗೆ ನಾಯಕರು ಬೇಡ. ಕಾರ್ಮಿಕರು ಬೇಕು ಎಂಬ ಅರ್ಥ ಖಾಕಿಗಿದೆ. ಆದ್ದರಿಂದಲ ಖಾಕಿ ಧರಿಸಿ ಪಕ್ಷ ಕಟ್ಟಿದ್ದೇವೆ. ಒಂದು ಕಾರ್ಪೋರೇಟ್‌ ಸಂಸ್ಥೆ ಭ್ರಷ್ಟಾಚಾರ ಮುಕ್ತವಾಗಿರುತ್ತದೆ. ಅಲ್ಲಿ ಹೆಚ್ಚಿನ ಸಮಸ್ಯೆ ಇರುವುದಿಲ್ಲ. ಆದರೆ ಎಲ್ಲಾ ಸೌಕರ್ಯವಿದ್ದರೂ ಮಕ್ತವಾಗಿ ಭ್ರಷಟಾಚಾರ ನಡೆಯುತ್ತದೆ. ಆದ್ದರಿಂದ ನಮಗೆ ನಾಯಕರು ಬಡ. ಜನರ ಸಂಪರ್ಕದಲ್ಲಿರುವ ಸೇವಕರು ಬೇಕಾಗಿದ್ದಾರೆ. ರಾಜಕೀಯದಲ್ಲಿ ಪಾರದರ್ಶಕತೆ ತರುವುದು ನಮ್ಮ ಉದ್ದೇಶ ಎಂದಿದ್ದಾರೆ.

ದೇಶದಲ್ಲಿ ಹಣ, ಜಾತಿ, ಜನರ ಮನೋಭಾವನೆಯನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಾರೆ. ದೇಶದ ಪ್ರತಿಯೊಬ್ಬ ಪ್ರಜೆಯೂ ಮೊದಲು ಬದಲಾಗಬೇಕು. ಅದಕ್ಕಾಗಿಯೇ ಪ್ರಜಾಕೀಯ ವೇದಿಕೆ ಸಿದ್ದವಾಗಿದೆ. ನಿಮ್ಮ ಯೋಚನೆಗಳನ್ನು ನಮ್ಮ ಜೊತೆ ಹಂಚಿಕೊಂಡು ನಮ್ಮೊಂದಿಗೆ ಕೈಜೋಡಿಸಿ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com