WATCH : ಸಖತ್‌ ಥ್ರಿಲ್ಲಿಂಗ್ ಆಗಿದೆ ಜುರಾಸಿಕ್‌ ವರ್ಲ್ಡ್‌ : ದ ಫಾಲನ್‌ ಕಿಂಗ್‌ ಡಮ್‌ನ ಟ್ರೇಲರ್

ಹಾಲಿವುಡ್‌ನ ಜುರಾಸಿಕ್‌ ವರ್ಲ್ಡ್‌ ಸೀರೀಸ್‌ ಮುಂದುವರೆದಿದ್ದು, ಐದನೇ ಭಾಗ ತೆರೆಗೆ ಬರಲು ಸಿದ್ದವಾಗಿದೆ. ಸದ್ಯ ಹಾಲಿವುಡ್‌ನ ಸಖತ್‌ ಎಕ್ಸೈಟ್‌ಮೆಂಟ್‌ ಸಿನಿಮಾ ಜ್ಯುರಾಸಿಕ್‌ ವರ್ಲ್ಡ್‌  ದ ಫಾಲನ್‌ ಕಿಂಗ್ಡಮ್‌ ಹೆಸರಿನ ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದ್ದು, ಎದೆ ಝಲ್ಲೆನಿಸುವ ದೃಶ್ಯಗಳು ಹೆಚ್ಚಿವೆ. ಈ ಸಿನಿಮಾ ಸಹ  ಹಿಂದಿದ್ದ ಚಿತ್ರಗಳಂತೆಯೇ ಕುತೂಹಲಕಾರಿಯಾಗಿರಲಿದೆ ಎಂಬುದು ಟ್ರೇಲರ್‌ನಿಂದಲೇ ತಿಳಿಯುತ್ತದೆ.

ಲಕ್ಷಾಂತರ ವರ್ಷಗಳ ಹಿಂದೆಯೇ ನಾಶವಾಗಬೇಕಿದ್ದ ಡೈನೋಸಾರ್‌ಗಳು ಈಗ ಇದ್ದರೆ ಯಾವ ರೀತಿ ಇರುತ್ತಿತ್ತು, ಅವುಗಳಿಂದಾಗುವ ಹಾನಿ, ಈ ವಿಚಾರವನ್ನಿಟ್ಟುಕೊಂಡು ಈ ಹಿಂದೆಯೂ ಜುರಾಸಿಕ್‌ ವರ್ಲ್ಡ್‌ ಸರಣಿಯ ಸಿನಿಮಾಗಳನ್ನು ಮಾಡಲಾಗಿತ್ತು. ಈಗ ಅದರ ಮತ್ತೊಂದು ಭಾಗ ತೆರೆಗೆ ಬರಲಿದೆ.

ಮೊದಲ ಬಾರಿಗೆ ಜುರಾಸಿಕ್‌ ವರ್ಲ್ಡ್‌ ಸಿನಿಮಾ 1993ರಲ್ಲಿ ತೆರೆ ಕಂಡಿತ್ತು. ಅದರ ಯಶಸ್ಸಿನ ಬಳಿಕ 1997ರಲ್ಲಿ ದಿ ಲಾಸ್ಟ್‌ ವರ್ಲ್ಡ್‌ ಜ್ಯುರಾಸಿಕ್‌ ಸಿನಿಮಾ ಬಿಡುಗಡೆಯಾಗಿತ್ತು. 2001ರಲ್ಲಿ ಜುರಾಸಿಕ್‌ ಪಾರ್ಕ್‌ -3 ರಿಲೀಸ್ ಆಗಿದ್ದು, 2015ರಲ್ಲಿ ಜುರಾಸಿಕ್‌ ವರ್ಲ್ಡ್-4 ಸಹ ಬಂದಿತ್ತು. ಈ ಎಲ್ಲಾ ಸಿನಿಮಾಗಳು ಸೂಪರ್ ಹಿಟ್‌ ಆಗಿದ್ದು, ಎರಡು ವರ್ಷದ ಬಳಿಕ ಜುರಾಸಿಕ್‌ ವರ್ಲ್ಡ್‌ : ದಿ ಫಾಲನ್ ಕಿಂಗ್ಡಮ್ ಸಿನಿಮಾ ತೆರೆ ಕಾರಣ ಸಿದ್ಧವಾಗಿದೆ.

Leave a Reply

Your email address will not be published.

Social Media Auto Publish Powered By : XYZScripts.com