Gujarath Election : ಮದ್ಯಾಹ್ನದ ವೇಳೆಗೆ ಶೇ.31ರಷ್ಟು ಮತದಾನ : EVMನದ್ದೇ ಮಾತು

ಸೂರತ್‌ : ಗುಜರಾತ್‌ನಲ್ಲಿ ಮತದಾನ ಪ್ರಕ್ರಿಯೆ ಮುಂದುವರಿದಿದ್ದು, ಮಧ್ಯಾಹ್ನದ ವೇಳೆ ಶೇ31ರಷ್ಟು ಮತದಾನವಾಗಿರುವುದಾಗಿ ತಿಳಿದುಬಂದಿದೆ.

ಬೆಳಗ್ಗೆ 8ಗಂಟೆಯಿಂದ ಮತದಾನ ಪ್ರಾರಂಭವಾಗಿದ್ದು, ಸೂರತ್‌ ಸೇರಿದಂತೆ ಕೆಲವೆಡೆ ಇವಿಎಂ ಯಂತ್ರಗಳಲ್ಲಿ ದೋಷ ಕಂಡುಬಂದಿದೆ ಎಂದು ಮೂಲಗಳು ವರದಿ ಮಾಡಿವೆ. ರಾಜ್‌ಕೋಟ್‌ನಲ್ಲಿ ಸುಮಾರು 35 ಇವಿಎಂ ಯಂತ್ರಗಳಲ್ಲಿ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಬೇರೆ ಇವಿಎಂ ಮಷೀನನ್ನು ಅಳವಡಿಸಲಾಗಿದೆ.

ಈ ಕುರಿತು ಚುನಾವಣಾ ಆಯೋಗ ಹೇಳಿಕೆ ನೀಡಿದ್ದು, ದೋಷಪೂರಿತ ಇವಿಎಂಗಳನ್ನು ತೆಗೆದು, ಬೇರೆ ಇವಿಎಂಗಳನ್ನು ಜೋಡಿಸಲಾಗಿದೆ. ಈಗ ಎಲ್ಲೆಡೆ ಇವಿಯಂ ಮಷೀನ್‌ ಸರಿಯಾಗಿ ಕೆಲಸ ನಿರ್ವಹಿಸುತ್ತಿರುವುದಾಗಿ ಹೇಳಲಾಗಿದೆ.

ರಾಜ್‌ ಕೋಟ್‌ ಮಾತ್ರವಲ್ಲದೆ, ಕೋಸಂಬ ಪ್ರದೇಶದಲ್ಲೂ ಇದೇ ರೀತಿ ತಾಂತ್ರಿಕ ತೊಂದರೆಯಾಗಿದ್ದು, ಮತದಾರರು ಮತದಾನ ಮಾಡಲು ಕಾದು ಹೈರಾಣಾಗಿದ್ದಾರೆ.

ಈ ಮಧ್ಯೆ ಪರ್ದಿಯ ಕಾಂಗ್ರೆಸ್‌ ಮುಖಂಡರೊಬ್ಬರು ಇವಿಎಂ ಮಷೀನ್‌ನಲ್ಲಿ ದೋಷವಿರುವುದಾಗಿ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಅಲ್ಲದೆ ಪೋರಬಂದರ್‌ನ ಮುಖಂಡ ಅರ್ಜುನ್‌ ಮೋದ್ವಾಡಿಯಾ ಸಹ, ಇವಿಎಂ ಮಷೀನ್‌ ಒಂದು ವೈಫೈಗೆ ಕನೆಕ್ಟ್‌ ಆಗಿರುವುದಾಗಿ ಆರೋಪಿಸಿದ್ದಾರೆ.

ದೋಷವಿರುವ ಎಲ್ಲಾ ಇವಿಎಂ ಮಷೀನ್‌ಗಳನ್ನು ತಕ್ಷಣವೇ ಸರಿ ಮಾಡುವಂತೆ ಕಾಂಗ್ರೆಸ್‌ ನಾಯಕ ಅಹ್ಮದ್‌ ಪಟೇಲ್ ಆಗ್ರಹಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com