ಇನ್ಮುಂದೆ mobile ನಲ್ಲೂ ಸಿಗಲಿದೆ ಮಾಜಿ ಸಿಎಂ ಸುದ್ದಿ : HDK ಜಾಲತಾಣದಿಂದ ಹೊಸ ಸೇವೆ ಆರಂಭ

ಬೆಂಗಳೂರು ; ಈಗಾಗಲೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಮಾಜಿ ಸಿಎಂ, ಎಚ್.ಡಿ ಕುಮಾರಸ್ವಾಮಿ ಜನರನ್ನು ಸೆಳೆಯಲು ಮತ್ತೊಂದು ಪ್ರಯತ್ನ ನಡೆಸಿದ್ದಾರೆ.

ಪ್ರತಿದಿನ ಅವರು ಮಾಡುವ ಕೆಲಸದ ಬಗ್ಗೆ ಮೊಬೈಲ್ ಮೂಲಕ ಜನರಿಗೆ ತಲುಪಿಸುವ ಯೋಜನೆ ಇದಾಗಿದ್ದು, ಈಗಾಗಲೆ ಫೇಸ್‌ಬುಕ್‌, ಟ್ವಿಟರ್, ಯೂಟ್ಯೂಬ್‌, ಸೌಂಡ್‌ಕ್ಲೌಡ್‌ನಲ್ಲಿ ಜನಪ್ರಿಯವಾಗಿರುವ ನಮ್ಮ ಎಚ್‌ಡಿಕೆ ಜಾಲತಾಣ ಈಗ ಮೊಬೈಲ್‌ಸೇವೆ ಆರಂಭಿಸಲಿದೆ.

9483869990 ಈ ನಂಬರ್‌ ಗೆ ಒಂದು ಮಿಸ್‌ ಕಾಲ್ ನೀಡಿದರೆ ಸಾಕು. ಆ ಸಂಖ್ಯೆ  ನಮ್ಮ ಎಚ್‌ಡಿಕೆ ಸೋಶಿಯಲ್‌ ಮೀಡಿಯಾದಲ್ಲಿ ನೋಂದಣಿಗೊಳ್ಳುತ್ತದೆ. ಪ್ರತಿ ದಿನ ಮೂರು ಬಾರಿ ಎಚ್‌ಡಿಕೆ ಅವರ ಸಭೆ, ಸಮಾರಂಭಗಲು, ಭಾಷಣ, ಪತ್ರಿಕಾಗೋಷ್ಠಿ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳ ಆಡಿಯೋ ಹಾಗೂ ವೀಡಿಯೋ ನೋಂದಣಿಯಾದ ನಂಬರ್‌ಗೆ ಬರುತ್ತದೆ.

ಪ್ರತಿದಿನ ಎಚ್‌ಡಿಕೆ ಅವರ ಆ ದಿನದ ಕಾರ್ಯಕ್ರಮದ ವಿವರದಿಂದ ಸುದ್ದಿ ಆರಂಭವಾಗಲಿದ್ದು, ದಿನದ ಕೊನೆಗೆ ಆ ದಿನದ  ಸಾರಾಂಶಗಳನ್ನು ನೀಡುವುದರ ಮೂಲಕ ಸಮಾಪ್ತಿಯಾಗುತ್ತದೆ. ಇದೇ ಭಾನುವಾರದಿಂದ ಮಿಸ್‌ ಕಾಲ್ ನೋಂದಾವಣಿಗೆ ಅವಕಾಶವಿರುತ್ತದೆ.

 

Leave a Reply

Your email address will not be published.

Social Media Auto Publish Powered By : XYZScripts.com