ಸುನಿಲ್‌ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ಆರೋಪ : ರವಿಯ ಎಲ್ಲಾ ಫಾರ್ಮ್‌ ಹೌಸ್‌ನಲ್ಲೂ ಪೊಲೀಸರ ಶೋಧ

ಬೆಂಗಳೂರು / ಚಿಕ್ಕಮಗಳೂರು  : ಪತ್ರಕರ್ತ, ಸಹೋದ್ಯೋಗಿ ರವಿ ಹೆಗ್ಗರವಳ್ಳಿ ಅವರ ಹತ್ಯೆಗೆ ಸುಪಾರಿ ನೀಡಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ರವಿ ಬೆಳಗೆರೆಯವರ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ಜಗಲಬೆಟೆಯಲ್ಲಿರುವ ಬರ್ಭುಜ ಫಾರ್ಮ್‌ ಹೌಸ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು, ಶೋಧ ಕಾರ್ಯ ನಡೆಸಿದ್ದಾರೆ.

ಸಿಸಿಬಿ ಸಿ.ಪಿ.ಐ ಗಳಾದ ಕುಮಾರ್ ,ಹೆಚ್ .ಡಿ ಕುಲಕರ್ಣಿ ಹಾಗೂ ಮೂವರು ಸಿಬ್ಬಂದಿಗಳಿಂದ ರವಿ ಬೆಳಗೆರೆ ಬೆಡ್ ರೂಮ್ ಹಾಗೂ ಕಪಾಟುಗಳ ಶೋಧ ನೆಡೆಸಿ ಮನೆಯಲ್ಲಿ ಕೆಲಸ ಮಾಡುತಿದ್ದ ಓರ್ವ ಮಹಿಳೆ ಹಾಗೂ ಇನ್ನೋರ್ವ ಕೆಲಸಗಾರನಾದ ಚಂದ್ರಕಾಂತ್ ನನ್ನು ತನಿಖೆಗೆ ವಳಪಡಿಸಿ ಪಂಚನಾಮೆ ಮಾಡಿದರು. ಬೆಳಗೆರೆ ಬಂಧನಕ್ಕೂ ಮೂರು ದಿನಗಳ ಹಿಂದೆ ಇದೇ ನಿವಾಸದಲ್ಲಿ ತಂಗಿದ್ದರು. ಈ ಹಿನ್ನಲೆಯಲ್ಲಿ ಹೆಚ್ಚಿನ ಮಾಹಿತಿಗಾಗಿ ಇಂದು ನಾಲ್ಕು ತಾಸಿಗೂ ಹೆಚ್ಚುಕಾಲ ಶೋಧ ಕಾರ್ಯ ನೆಡೆಸಲಾಯ್ತು .ಇನ್ನು ಹೆಚ್ಚಿನ ಮಾಹಿತಿಗಳು ಸಿಗದ ಹಿನ್ನಲೆಯಲ್ಲಿ ಸಿಸಿಬಿ ಅಧಿಕಾರಿಗಳು ಸಂಜೆ ವೇಳೆಗೆ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನು ಎರಡನೇ ಪತ್ನಿ ಯಶೋಮತಿ ಅವರಿದ್ದ ರಾಜರಾಜೇಶ್ವರಿ ನಗರದ ಮನೆಗೂ ತೆರಳಿದ್ದು ತನಿಖೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.

 

 

Leave a Reply

Your email address will not be published.

Social Media Auto Publish Powered By : XYZScripts.com