ಮೋದಿಯನ್ನು ಮುಗಿಸಲು ಪಾಕಿಸ್ತಾನಕ್ಕೆ ಕಾಂಗ್ರೆಸ್ ನಾಯಕನಿಂದ ಸುಪಾರಿ……??!!
ಅಹಮದಾಬಾದ್ : ಪ್ರಧಾನಿ ಮೋದಿಯವರನ್ನು ನೀಚ್ ಆದ್ಮಿ ಎಂದು ಕರೆದಿದ್ದ ಕಾಂಗ್ರೆಸ್ನಿಂದ ಅಮಾನತುಗೊಂಡ ನಾಯಕ ಮಣಿಶಂಕರ್ ಅಯ್ಯರ್ ಕುರಿತು ಪ್ರಧಾನಿ ಮೋದಿ ತೀಕ್ಷ್ಣವಾಗಿ ಆರೋಪಿಸಿದ್ದಾರೆ.
ಮಣಿಶಂಕರ್ ಅಯ್ಯರ್ ನನ್ನ ಹತ್ಯೆ ಮಾಡಲು ಪಾಕಿಸ್ತಾನಕ್ಕೆ ಸುಪಾರಿ ನೀಡಿದ್ದರು. ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮೋದಿಯನ್ನು ಮುಗಿಸಿಬಿಡಿ. ಆಮೇಲೆ, ಭಾರತ-ಪಾಕಿಸ್ತಾನದ ನಡುವೆ ಯಾವ ರೀತಿಯ ಶಾಂತಿ ಸ್ಥಾಪಿಸುತ್ತದೆ ಎಂಬುದನ್ನು ನೋಡಿ ಎಂದಿರುವುದಾಗಿ ಮೋದಿ ಹೇಳಿದ್ದಾರೆ.
ಶುಕ್ರವಾರ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ನಾನು ಬಡತನದಿಂದ ಬಂದಿದ್ದೇನೆ ನಿಜ. ಚಹಾ ಮಾರುತ್ತಿದ್ದೆ ಎಂಬ ಕಾರಣಕ್ಕೆ ಕಾಂಗ್ರೆಸ್ ನನ್ನನ್ನು ಟೀಕೆ ಮಾಡುತ್ತಿರುವುದಾಗಿ ಆರೋಪಿಸಿದ್ದಾರೆ.
ಭಾರತ ಹಾಗೂ ಪಾಕಿಸ್ತಾನ ದೇಶಗಳ ಮಧ್ಯೆ ಶಾಂತಿ ಸ್ಥಾಪನೆಯಾಗಬೇಕಾದರೆ ಏನು ಮಾಡಬೇಕು ಎಂದು ಪಾಕಿಸ್ತಾನದ ಮಾಧ್ಯಮವೊಂದು ಅಯ್ಯರ್ ಅವರನ್ನು ಕೇಳಿತ್ತು. ಅದಕ್ಕೆ ಮೊದಲು ಮೋದಿಯನ್ನು ಮುಗಿಸಿಬಿಡಿ. ಆಮೇಲೆ ಈ ಬಗ್ಗೆ ನಾವು ಮಾತನಾಡಬಹುದು ಎಂದು ಅಯ್ಯರ್ ಹೇಳಿದ್ದರು ಎಂದು ಆರೋಪಿಸಿದ್ದಾರೆ.