Sunny night : ಹಾಟ್‌ ಹುಡುಗಿ ಸನ್ನಿ ಲಿಯೋನ್‌ ಸೀರೆಯುಟ್ಟು ಬೆಂಗಳೂರಿಗೆ ಬರ್ತಾರಾ….?!!

ಬೆಂಗಳೂರು : ಬಾಲಿವುಡ್‌ನ ಮಾದಕ ಬೆಡಗಿ ಸನ್ನಿ ಲಿಯೋನ್‌ ಹೊಸ ವರ್ಷಾಚರಣೆಗೆ ಬೆಂಗಳೂರಿಗೆ ಬರುತ್ತಿದ್ದಾರೆ. ಅಲ್ಲದೆ ಈ ಬಾರಿ ನ್ಯೂ ಇಯರ್‌ಗೆ ಬೆಂಗಳೂರಿಗರಿಗೆ ಕಿಕ್ ಕೊಡಲು ಸನ್ನಿ ಬರುತ್ತಿದ್ದು, ಇದಕ್ಕಾಗಿ ಸನ್ನಿ ನೈಟ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಆದರೆ ಸನ್ನಿ ಲಿಯೋನ್‌ ಬೆಂಗಳೂರಿಗೆ ಬರುತ್ತಿರುವುದಕ್ಕೆ ಕರವೇ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕರ್ನಾಟಕಕ್ಕೆ ಸನ್ನಿ ಲಿಯೋನ್‌ರನ್ನು ಬರಲು ಬಿಡುವುದಿಲ್ಲ ಎಂದಿದ್ದಾರೆ.

ಟೈಮ್ಸ್ ಕ್ರಿಯೇಶನ್‌ ಸನ್ನಿ ನೈಟ್‌ ಕಾರ್ಯಕ್ರಮ ಆಯೋಜಿಸಿದೆ. ಇದು ನಮ್ಮ ಸಂಸ್ಕೃತಿ ಅಲ್ಲ. ಬೆತ್ತಲೆಯಾಗುವ ನಟಿಯೊಬ್ಬಳು ಇಲ್ಲಿ ಬಂದು ಸೊಂಟ ಬಳುಕಿಸಿ ನಮ್ಮ ಯುವ ಜನರನ್ನು ಹಾಳು ಮಾಡುವುದು ಬೇಡ ಎಂದು ಕರವೇ ಕಾರ್ಯಕರ್ತರು ಹೇಳಿದ್ದು, ಸನ್ನಿ ಲಿಯೋನ್ ಭಾವಚಿತ್ರವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಸನ್ನಿ ಲಿಯೋನ್‌ ಬರುವುದೇ ಆದರೆ ಸೀರೆಯುಟ್ಟುಕೊಂಡು ಬಂದು ಕಾರ್ಯಕ್ರಮ ನಡೆಸಲಿ ಎಂದಿದ್ದಾರೆ. ಜೊತೆಗೆ ಕಾರ್ಯಕ್ರಮದ ಆಯೋಜಕರು ಹಾಗೂ ಕಮಿಷನರ್‌ಗೆ ಕಾರ್ಯಕ್ರಮವನ್ನು ರದ್ದು ಮಾಡುವಂತೆ ಮನವಿ ಮಾಡಲಾಗಿದೆ.

ಏನೇ ಆದರೂ ಸನ್ನಿ ಲಿಯೋನ್‌ ಬರುತ್ತಾರೆ ಎಂದು ಕಾದು ಕುಳಿತಿದ್ದ ಯುವಕರಿಗೆ ಕಸಿವಿಸಿಯಾಗಿರುವುದಂತೂ ಸತ್ಯ.

 

Leave a Reply

Your email address will not be published.

Social Media Auto Publish Powered By : XYZScripts.com