ಅನು weds ಅಯ್ಯಪ್ಪ : ಸದ್ಯದಲ್ಲೇ ಹಸೆಮಣೆ ಏರಲಿದೆ ಮತ್ತೊಂದು ಜೋಡಿ

ಸ್ಯಾಂಡಲ್‌ವುಡ್‌ನಲ್ಲಿ ಈ ಬಾರಿ ಒಂದರ ಮೇಲೊಂದರಂತೆ ಮದುವೆ ಸುದ್ದಿಗಳು ಕೇಳಿಬರುತ್ತಿವೆ. ಇತ್ತೀಚೆಗಷ್ಟೇ ಬಿಗ್‌ಬಾಸ್‌ ಸೀಸನ್‌ 4ರ ಸ್ಪರ್ಧಿ ಸಂಜನಾ ಮದುವೆ ವಿಚಾರ ಬಹಿರಂಗವಾಗಿತ್ತು. ಬಳಿಕ ಗೂಗ್ಲಿ ನಿರ್ದೇಶಕ ಪವನ್‌ ಒಡೆಯರ್‌ ಹಾಗೂ ಅಪೇಕ್ಷಾ ನಿಶ್ಚಿತಾರ್ಥ ಸಹ ಡಿಸೆಂಬರ್‌ 7ರಂದು ನೆರವೇರಿತ್ತು.

ಆದರೆ ಈಗ ಬಿಗ್‌ಬಾಸ್‌ನ ಮತ್ತೊಬ್ಬ ಸ್ಪರ್ಧಿ, ಕ್ರಿಕೆಟರ್‌ ಅಯ್ಯಪ್ಪ ಹಸೆಮಣೆ ಏರಲು ಸಿದ್ಧರಾಗುತ್ತಿದ್ದಾರೆ ಎಂದು ತಿಳಿದುಬಂದಿದೆ. ಕರ್ವ ಸಿನಿಮಾದ ನಾಯಕಿ ಅನು, ಅಯ್ಯಪ್ಪ ಅವರ ಕೈ ಹಿಡಿಯಲಿದ್ದಾರಂತೆ. ಇಬ್ಬರೂ ಕೊಡಗು ಮೂಲದವರಾಗಿದ್ದು, ಸದ್ಯದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳುವುದಾಗಿ ತಿಳಿದುಬಂದಿದೆ.

ಅಯ್ಯಪ್ಪ ಹಾಗೂ ಅನು ಬಹುಕಾಲದ ಸ್ನೇಹಿತರಾಗಿದ್ದು, ಇಬ್ಬರೂ ಗುರು ಹಿರಿಯರ ಒಪ್ಪಿಗೆ ಪಡೆದು ಮದುವೆ ಮಾಡಿಕೊಳ್ಳಲಿದ್ದಾರೆ. ನಿಶ್ಚಿತಾರ್ಥದ ದಿನಾಂಕ ಇನ್ನೂ ನಿಗಧಿಯಾಗಿಲ್ಲ.

 

Leave a Reply

Your email address will not be published.