ಪ್ರಭಾಸ್‌ಗೆ ಬಾಲಿವುಡ್‌ನ ‘ಮಸ್ತ್’ ನಟಿಯ ಮೇಲೆ ‘Secret Crush’ ಅಂತೆ..!

ಬ್ಲಾಕ್ ಬಸ್ಟರ್ ಬಾಹುಬಲಿ ಚಿತ್ರದ ಮೂಲಕ ದೇಶಾದ್ಯಂತ ಹೆಸರು ಗಳಿಸಿದ ನಟ ಪ್ರಭಾಸ್, ಅನೇಕ ಮಹಿಳಾ ಅಭಿಮಾನಿಗಳನ್ನು ಹೊಂದಿದ್ದಾರೆ. ಪ್ರಭಾಸ್ ಗೆ 90ರ ದಶಕದ ಬಾಲಿವುಡ್ ಹೀರೋಯಿನ್ ಒಬ್ಬಾಕೆಯ ಮೇಲೆ ಸೀಕ್ರೆಟ್ ಕ್ರಷ್ ಇತ್ತಂತೆ. ಆ ನಟಿ ಬೇರೆ ಯಾರೂ ಅಲ್ಲ, 90ರ ದಶಕದಲ್ಲಿ ‘ತು ಚೀಜ್ ಬಡೀ ಹೈ ಮಸ್ತ್ ಮಸ್ತ್ ‘ ಹಾಡಿನ ಮೂಲಕ ಜನಪ್ರಿಯತೆ ಗಳಿಸಿದ್ದ ರವೀನಾ ಟಂಡನ್.

ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಪ್ರಭಾಸ್ ಈ ವಿಷಯವನ್ನು ಹೊರಹಾಕಿದ್ದಾರೆ. ‘ ನಾನು ರವೀನಾ ಅವರ ದೊಡ್ಡ ಅಭಿಮಾನಿ. ಅಂದಾಜ್ ಅಪ್ನಾ ಅಪ್ನಾ ಚಿತ್ರದಲ್ಲಿ ರವೀನಾ ಅಭಿನಯಿಸಿರುವ ಎಲೊ ಜಿ ಸನಮ್ ಹಾಡೆಂದರೆ ನನಗೆ ತುಂಬಾ ಇಷ್ಟ ‘ ಎಂದು ಪ್ರಭಾಸ್ ಹೇಳಿದ್ದಾರೆ.

ಕೆಲ ತಿಂಗಳುಗಳ ಹಿಂದೆ ಪ್ರಭಾಸ್ ಅವರನ್ನು ಭೇಟಿಯಾಗಿದ್ದ ರವೀನಾ ಟಂಡನ್, ಟ್ವಿಟರಿನಲ್ಲಿ ಈ ಚಿತ್ರವನ್ನು ಹಂಚಿಕೊಂಡಿದ್ದರು.

ಪ್ರಭಾಸ್ ಬಾಲಿವುಡ್ ನಟಿ ಶೃದ್ಧಾ ಕಪೂರ್ ಅವರೊಂದಿಗೆ ‘ಸಾಹೋ’ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com