ದೇವೇಗೌಡ್ರಿಗೆ ನನ್ನ ಮೇಲೆ ಸಾಫ್ಟ್‌ ಕಾರ್ನರೂ ಇಲ್ಲ, ಹಾರ್ಡ್‌ ಕಾರ್ನರೂ ಇಲ್ಲ : ಸಿದ್ದರಾಮಯ್ಯ

ಬಳ್ಳಾರಿ : ಸಿಎಂ ಸಿದ್ದರಾಮಯ್ಯ ಅವರ ಮೇಲೆ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರ ಸಾಫ್ಟ್‌ ಕಾರ್ನರ್ ವಿಚಾರ ಸಂಬಂಧ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ನನ್ನ ಮೇಲೆ ಅವರಿಗೆ ಸಾಪ್ಟ್‌ ಕಾರ್ನರೂ ಅಲ್ಲ, ಹಾರ್ಡ್‌ ಕಾರ್ನರೂ ಇಲ್ಲ ಎಂದಿದ್ದಾರೆ.

ಮೈಸೂರಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೃಷಿ ಹೊಂಡದ ವಿಚಾರ, ಅಕ್ಕಿ ವಿತರಿಸುವ ವಿಚಾರ, ಹಾಲು ಉತ್ಪಾದಕರ ವಿಚಾರವಾಗಿ ದೇವೇಗೌಡರ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಲಿ. ಅವರು ಯಾರ ಪರ ಎಂಬುದನ್ನೂ ಸ್ಪಷ್ಟಪಡಿಸಲಿ ಎಂದಿದ್ದಾರೆ.

ದೇವೇಗೌಡರಿಗೆ ಒಳ್ಳೆಯದಾಗಲಿ. ನಮ್ಮಿಬ್ಬರ ಸಂಬಂಧ ಇದ್ದದ್ದೇ. ಈಗ ರಾಜಕೀಯವಾಗಿ ಬೇರೆ ಇದ್ದೇವಷ್ಟೇ. ನಮ್ಮ ಸಿದ್ಧಾಂತ, ಅವರ ಸಿದ್ಧಾಂತ ಬೇರೆ ಎಂದಿದ್ದಾರೆ.

ಅಲ್ಲದೆ ಸಿಎಂ ಗಂಟುಮೂಟೆ ಕಟ್ಟಿಕೊಂಡು ಮೈಸೂರಿಗೆ ಹೊರಡುತ್ತಾರೆ ಎಂಬ ಬಿಜೆಪಿಯವರ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿರುವ ಸಿಎಂ, ಯಾವ ಕಾರಣಕ್ಕೂ ಯಡಿಯೂರಪ್ಪ ಸಿಎಂ ಆಗಲ್ಲ. ಅವರು ಅಧಿಕಾರಕ್ಕೆ ಬರುವುದಿಲ್ಲ ಎಂದಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com