FootBall : 5ನೇ ಬಾರಿಗೆ Ballon d’Or ಪ್ರಶಸ್ತಿ ಗೆದ್ದ ಕ್ರಿಸ್ಟಿಯಾನೋ ರೊನಾಲ್ಡೊ

ವಿಶ್ವ ವಿಖ್ಯಾತ ಫುಟ್ಬಾಲ್ ಆಟಗಾರ, ಕ್ರಿಸ್ಟಿಯಾನೋ ರೊನಾಲ್ಡೊ 5ನೇ ಬಾರಿಗೆ Ballon d’Or ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಲಿಯೋನೆಲ್ ಮೆಸ್ಸಿ ಹಾಗೂ ನೆಯ್ಮರ್ ಜೂನಿಯರ್ ಅವರನ್ನು ಹಿಂದಿಕ್ಕಿದ ರೊನಾಲ್ಡೊ, ಪ್ರಶಸ್ತಿ ಜಯಿಸಿದ್ದಾರೆ.

ಇದಕ್ಕೂ ಮುಂಚೆ ರೊನಾಲ್ಡೊ 2008, 2013, 2014, 2016 ರ ಸಾಲಿನ Ballon d’Or ಪ್ರಶಸ್ತಿ ಗೆದ್ದಿದ್ದರು. ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಕೂಡ 5 ಬಾರಿ Ballon d’Or ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.

Image result for ronaldo ballon d'Or paris 2017

ಪ್ಯಾರಿಸ್ ನ ಐಫೆಲ್ ಟಾವರ್ ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರೊನಾಲ್ಡೊ, ‘ ಸಹಜವಾಗಿಯೇ ನನಗೆ ಇದರಿಂದ ಖುಷಿಯಾಗಿದೆ. ಪ್ರತಿ ವರ್ಷವೂ ನಾನು ಇದನ್ನು ಇದಿರು ನೋಡುತ್ತೇನೆ. ಕಳೆದ ವರ್ಷ ಟ್ರೋಫಿಗಳನ್ನು ಗೆದ್ದಿದ್ದು, ಈ ಪ್ರಶಸ್ತಿ ದೊರೆಯಲು ಕಾರಣವಾಯಿತು. ರಿಯಲ್ ಮ್ಯಾಡ್ರಿಡ್ ತಂಡದ ಸಹ ಆಟಗಾರರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಈ ಹಂತಕ್ಕೆ ತಲುಪಲು ಸಹಾಯ ಮಾಡಿದ ಎಲ್ಲರಿಗೂ ನನ್ನ ಧನ್ಯವಾದಗಳು ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com