ಮೋದಿಗೆ ಯಾರಾದರು ಪ್ರಶ್ನೆ ಮಾಡಿದ್ರೆ ಸಿಟ್ಟು ಬರುತ್ತೆ ಎಂದಿದ್ದ ಸಂಸದ ಪಟೋಳೆ ರಾಜೀನಾಮೆ

ದೆಹಲಿ : ಕೆಲ ದಿನಗಳ ಹಿಂದೆ ಪ್ರಧಾನಿ ಮೋದಿ ಅವರನ್ನು ಯಾರಾದರು ಪ್ರಶ್ನೆ ಮಾಡಿದರೆ ಅವರು ಸಹಿಸುವುದಿಲ್ಲ ಎಂದಿದ್ದ ಬಿಜೆಪಿ ಸಂಸದ ನಾನಾ ಪಟೋಳೆ ಶುಕ್ರವಾರ ಸಂಸದ ಸ್ಥಾನಕ್ಕೆ ಹಾಗೂ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ರಾಜೀನಾಮೆ ಪತ್ರವನ್ನು ಸ್ಪೀಕರ್‌ ಸುಮಿತ್ರಾ ಮಹಾಜನ್‌ ಅವರಿಗೆ ಸಲ್ಲಿಸಿರುವುದಾಗಿ ಪಟೋಳೆ ತಿಳಿಸಿದ್ದಾರೆ. ಅಲ್ಲದೆ ಬಿಜೆಪಿ ರಾಷ್ಟ್ರಾಧ್ಯಕ್ಷರಿಗೂ ರಾಜೀನಾಮೆ ಪತ್ರ ತಲುಪಿಸಿರುವುದಾಗಿ ಹೇಳಿದ್ದಾರೆ.
 ರಾಜೀನಾಮೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಟೋಳೆ, ನಾನು ಬಿಜೆಪಿಗೆ ಸೇರಿಕೊಳ್ಳುವಾಗ ಇಟ್ಟುಕೊಂಡಿದ್ದ ಉದ್ದೇಶವನ್ನು ತಿರಸ್ಕರಿಸಲಾಗಿದೆ. ಆದರೆ ನಾನೀಗ ಸಂಪೂರ್ಣ ಸ್ವತಂತ್ರನಾಗಿದ್ದೇನೆ. ಇನ್ಯಾರಿಗೂ ತಲೆಬಾಗುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
 ಕೆಲ ದಿನಗಳ ಹಿಂದೆ ಬಿಜೆಪಿಯ ಸಂಸದೀಯ ಸಭೆಯಲ್ಲಿ ರೈತರ ಆತ್ಮಹತ್ಯೆ ವಿಚಾರ ಪ್ರಸ್ತಾಪಿಸಲು ಮುಂದಾದಾಗ ಪ್ರಧಾನಿ ಮೋದಿ ಬಾಯಿ ಮುಚ್ಚಿಕೊಂಡಿರುವಂತೆ ಸೂಚಿಸಿದ್ದರು. ಅಲ್ಲದೆ ನನ್ನ ಮೇಲೆ ಸಿಟ್ಟು ಮಾಡಿಕೊಂಡಿದ್ದರು ಎಂದು ಪಟೋಳೆ ಹೇಳಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com