ಆಫ್ರಿಕಾ ಸರಣಿಯ ಬಗ್ಗೆ ಭವಿಷ್ಯ ನುಡಿದ ವಾಲ್ : ದ್ರಾವಿಡ್ ಹೇಳಿದ್ದೇನು..?

ಜನೆವರಿ 5 ರಿಂದ ದಕ್ಷಿಣ ಆಫ್ರಿಕಾ ಹಾಗೂ ಭಾರತ ತಂಡಗಳ ನಡುವೆ ಶುರುವಾಗಲಿರುವ ಟೆಸ್ಟ್ ಸರಣಿಯ ಬಗ್ಗೆ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಭವಿಷ್ಯ ನುಡಿದಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿರುವ ದ್ರಾವಿಡ್ ‘ ಸದ್ಯದ ಭಾರತ ತಂಡದ ಸಾಮರ್ಥ್ಯವನ್ನು ಗಮನಿಸಿದರೆ, ಆಫ್ರಿಕಾ ನೆಲದಲ್ಲಿ ಮೊಟ್ಟ ಮೊದಲ ಸರಣಿಯನ್ನು ಗೆಲ್ಲಲು ಟೀಮ್ ಇಂಡಿಯಾಗೆ ಅತ್ಯುತ್ತಮ ಅವಕಾಶವಿದೆ ಎನಿಸುತ್ತದೆ ‘ ಎಂದಿದ್ದಾರೆ.

Image result for rahul dravid prediction africa

‘ ನಮ್ಮಲ್ಲಿ ಗುಣಮಟ್ಟದ ವೇಗದ ಬೌಲರ್ ಗಳಿದ್ದಾರೆ. ಅಗತ್ಯ ಬಿದ್ದರೆ ಆಲ್ರೌಂಡರ್ ರೂಪದಲ್ಲಿ ಹಾರ್ದಿಕ್ ಪಾಂಡ್ಯ ಅವರನ್ನು ಆಡಿಸಲೂ ಸಹ ಅವಕಾಶವಿದೆ. ಅಶ್ವಿನ್ ಹಾಗೂ ಜಡೇಜಾರಂತಹ ಗುಣಮಟ್ಟದ ಸ್ಪಿನ್ನರ್ ಗಳಿದ್ದಾರೆ. ನಮ್ಮ ಬ್ಯಾಟ್ಸಮನ್ ಗಳು ಈ ಮಂಚೆ ದಕ್ಷಿಣ ಆಫ್ರಿಕಾದಲ್ಲಿ ಆಡಿದ್ದು, 40-50 ಟೆಸ್ಟ್ ಪಂದ್ಯಗಳನ್ನಾಡಿದ ಅನುಭವವನ್ನು ಹೊಂದಿದ್ದಾರೆ ‘ ಎಂದು ಹೇಳಿದ್ದಾರೆ.

‘ ಅಲ್ಲಿನ ಪರಿಸ್ಥಿತಿಯಲ್ಲಿ ಕೊಂಚ ಮಟ್ಟಿಗೆ ಅದೃಷ್ಟದ ಬೆಂಬಲವೂ ಬೇಕು. ಪಿಚ್ ನಮ್ಮ ಬೌಲರ್ ಗಳಿಗೆ ಸಹಕಾರಿಯಾಗಿರಬೇಕು. ಈ ಭಾರಿ ಭಾರತದ ಗೆಲುವಿನ ಸಾಧ್ಯತೆಯ ಬಗ್ಗೆ ನನಗೆ ವಿಶ್ವಾಸವಿದೆ ‘ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com