Ranaji Quarter Final : ಮಿಂಚಿದ ಶ್ರೇಯಸ್ : ಕರ್ನಾಟಕಕ್ಕೆ 222 ರನ್ ಮುನ್ನಡೆ

ನಾಗ್ಪುರದಲ್ಲಿ ಮುಂಬೈ ಹಾಗೂ ಕರ್ನಾಟಕ ತಂಡಗಳ ನಡುವೆ ರಣಜಿ ಟ್ರೋಫಿ ಕ್ವಾರ್ಟರ್ ಫೈನಲ್ ಪಂದ್ಯ ನಡೆಯುತ್ತಿದೆ. ಎರಡನೇ ದಿನದಾಟದ ಅಂತ್ಯಕ್ಕೆ ಕರ್ನಾಟಕ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 6 ವಿಕೆಟ್ ನಷ್ಟಕ್ಕೆ 395 ರನ್ ಗಳಿಸಿದ್ದು, 222 ರನ್ ಮಹತ್ವದ ಮುನ್ನಡೆ ಸಾಧಿಸಿದೆ. ಮುಂಬೈ ಪರವಾಗಿ ಶಿವಮ್ ದೂಬೆ 5 ಹಾಗೂ ಶಿವಮ್ ಮಲಹೋತ್ರಾ 1 ವಿಕೆಟ್ ಪಡೆದರು.

ಕರ್ನಾಟಕದ ಪರವಾಗಿ ಮಯಂಕ್ ಅಗರವಾಲ್ 78, ಕೌನೇನ್ ಅಬ್ಬಾಸ್ 50, ಸಿ ಎಮ್ ಗೌತಮ್ 79 ರನ್ ಗಳಿಸಿದರು. ದಿನದಾಟ ಮುಗಿದಾಗ 80 ರನ್ ಗಳಿಸಿರುವ ಶ್ರೇಯಸ್ ಗೋಪಾಲ್ ಹಾಗೂ 31 ರನ್ ಗಳಿಸಿರುವ ನಾಯಕ ವಿನಯ್ ಕುಮಾರ್ ಅಜೇಯರಾಗುಳಿದಿದ್ದಾರೆ.

ಗುರುವಾರ ಮೊದಲನೇ ದಿನ ವಿನಯ್ ಕುಮಾರ್ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ವಿನಯ್ ಕುಮಾರ್ ದಾಳಿಗೆ ಸಿಲುಕಿದ ಮುಂಬೈ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 173 ಕ್ಕೆ ಆಲೌಟ್ ಆಗಿತ್ತು.

Leave a Reply

Your email address will not be published.