ಪಾರ್ವತಮ್ಮ ಹುಟ್ಟುಹಬ್ಬ : ಅನಾಥಾಶ್ರಮದ ಮಕ್ಕಳಲ್ಲಿ ಅಮ್ಮನ ಕಂಡ ಪುನೀತ್‌ ರಾಜ್‌ ಕುಮಾರ್‌

ಮೈಸೂರು : ಡಿಸೆಂಬರ್‌ 6ರಂದು ದಿವಂಗತ ಪಾರ್ವತಮ್ಮ ಅವರ 78ನೇ ಜನ್ಮದಿನವಾಗಿದ್ದು, ಈ ಹಿನ್ನೆಲೆಯಲ್ಲಿ ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಹಾಗೂ ಪತ್ನಿ ಅಶ್ವಿನಿ ಅನಾಥಾಶ್ರಮಕ್ಕೆ ಭೇಟಿ ನೀಡಿದ್ದಾರೆ.

 

ತಾಯಿಯ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪುನೀತ್‌ ಹಾಗೂ ಪತ್ನಿ ಅಶ್ವಿನಿ ನಗರದ ಶಕ್ತಿಧಾಮಕ್ಕೆ ಭೇಟಿ ನೀಡಿದ್ದು, ಅಲ್ಲಿ ಪಾರ್ವತಮ್ಮ ರಾಜ್‌ ಕುಮಾರ್‌ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ್ದಾರೆ. ಬಳಿಕ ಮಕ್ಕಳಿಗೆ ಹಾಗೂ ಸಿಬ್ಬಂದಿಗೆ ಹೊಸ ಬಟ್ಟೆ ಹಾಗೂ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ್ದಾರೆ. ಅಷ್ಚೇ ಅಲ್ಲದೆ ಪುನೀತ್‌ ತಮ್ಮ ಫೇಸ್‌ಬುಕ್‌ನಲ್ಲಿ ಹ್ಯಾಪಿ ಬರ್ತ್‌ ಡೇ ಅಮ್ಮ ಎಂದು ಬರೆದು ಪಾರ್ವತಮ್ಮ ಅವರೊಂಗಿನ ತಮ್ಮ ಹಳೆಯ ಫೋಟೋಗಳನ್ನು ಪೋಸ್ಟ್‌ ಮಾಡಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com