CM ಯೋಗಿ ಆದಿತ್ಯನಾಥ್‌ರನ್ನು ಮದುವೆಯಾದ ಅಂಗನವಾಡಿ ಕಾರ್ಯಕರ್ತೆ !!!!

ಲಖನೌ : ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಅವರನ್ನು ಅಂಗನವಾಡಿ ಕಾರ್ಯಕರ್ತೆಯೊಬ್ಬರು ವರಿಸಿದ್ದಾರೆ.

ಸಿಎಂ ಯೋಗಿ ಆದಿತ್ಯನಾಥ್‌ ಅವರ ಗಮನ ಸೆಳೆಯುವ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯೊಬ್ಬರು ವಿಭಿನ್ನ ರೀತಿಯ ಪ್ರತಿಙಭಟನೆ ನಡೆಸಿದ್ದಾರೆ. ತಮ್ಮ ಬೇಡಿಕೆಯನ್ನು ಈಡೇರಿಸುವಂತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಅವರಿಗೆ ಅಂಗನವಾಡಿ ಕಾರ್ಯಕರ್ತೆಯೊಬ್ಬರು ನಾಲ್ಕು ತಿಂಗಳ ಗಡುವು ನೀಡಿದ್ದರು.

ಆದರೆ ಅವರು ಅಧಿಕಾರಕ್ಕೆ ಬಂದು ಎಂಟು ತಿಂಗಳು ಕಳೆದರೂ ತಮ್ಮ ಬೇಡಿಕೆಗಳು ಈಡೇರದ ಹಿನ್ನೆಲೆಯಲ್ಲಿ ವಿಭಿನ್ನವಾಗಿ ಪ್ರತಿಭಟಿಸಿದ್ದು, ಯೋಗಿ ಆದಿತ್ಯನಾಥ್‌ ಅವರ ಫೋಟೋಗೆ ಹೂವಿನ ಹಾರ ಹಾಕಿ ವಧುವಾಗಿ ಅವರನ್ನು ವರಿಸಿದ್ದಾರೆ. ಈ ವೇಳೆ ಇನ್ನಿತರೆ ಅಂಗನವಾಡಿ ಕಾರ್ಯಕರ್ತೆಯರು ಮದುವೆ ಸಮಾರಂಭಕ್ಕೆ ವೇದ, ಗಟ್ಟಿಮೇಳ ಬಾರಿಸಿದರು.

ಬಳಿಕ ಮಾತನಾಡಿದ ಕಾರ್ಯಕರ್ತೆ ನೀತು ಸಿಂಗ್‌, ನಮ್ಮ ಬೇಡಿಕೆಗಳನ್ನು ನನ್ನ ಪತಿ ಯೋಗಿ ಆದಿತ್ಯನಾಥ್‌ ಈಡೇರಿಸದಿದ್ದರೆ, ನಾನು ಕುದುರೆ ಏರಿ ರಾಜಧಾನಿಗೆ ಹೋಗಿ ನೇರವಾಗಿ ಅವರನ್ನೇ ಕಾಣುತ್ತೇನೆ ಎಂದಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com