ಮತ್ತೊಬ್ಬ ಕಾಮಿಸ್ವಾಮಿಯ ಕಾಮಪುರಾಣ ಬಯಲು : ಬಹಿರಂಗವಾಯ್ತು ರಾಸಲೀಲೆ ವಿಡಿಯೊ

ಕೊಪ್ಪಳ : ರಾಜ್ಯದಲ್ಲಿ ಮತ್ತೊಬ್ಬ ಸ್ವಾಮೀಜಿಯ ಕಾಮ ಪುರಾಣ ಬಯಲಾಗಿದೆ. ನಿತ್ಯಾನಂದ, ಯಲಹಂಕದ ಮದ್ದೇವಣ್ಣ ಪುರ ಮಠದ ಕಿರಿಯ ಸ್ವಾಮೀಜಿ ರೀತಿಯೇ ಈ ಸ್ವಾಮೀಜಿ ಸಹ ಸಿಕ್ಕಿಬಿದ್ದಿದ್ದು, ರಾಸಲೀಲೆಯ ವಿಡಿಯೊವನ್ನು ಅವರ ಕಾರು ಚಾಲಕನೇ ಬಿಡುಗಡೆ ಮಾಡಿದ್ದಾನೆ.

ಗಂಗಾವತಿಯ ಕಲ್ಮಠದ ಕೊಟ್ಟೂರ ಸ್ವಾಮೀಜಿಯ ರಾಸಲೀಲೆ ಪ್ರಕರಣದ ವಿಡಿಯೊ ಎಲ್ಲೆಡೆ ವೈರಲ್ ಆಗಿದೆ. ಲಾಡ್ಜ್‌ನಲ್ಲಿ ಸ್ವಾಮೀಜಿ , ಯುವತಿಯೊಂದಿಗೆ ಅರೆನಗ್ನಾವಸ್ಥೆಯಲ್ಲಿರುವ ವಿಡಿಯೊ ತುಣುಕು ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಈ ಮಠದ ಹೆಸರಿನ ಅಡಿಯಲ್ಲಿ ಅನೇಕ ಶಿಕ್ಷಣ ಸಂಸ್ಥೆಗಳು ಕೆಲಸ ನಿರ್ವಹಿಸುತ್ತಿದ್ದು, ಈ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುವ ಮಹಿಳೆಯರು, ಶಿಕ್ಷಕಿಯರು, ಗ್ರಂಥಪಾಲಕರು ಹೀಗೆ ಎಲ್ಲರ ಜೊತೆಯೂ ಸ್ವಾಮೀಜಿ ಮಂಚ ಹಂಚಿಕೊಂಡಿದ್ದಾನೆ ಎಂದು ಚಾಲಕ ಮಲ್ಲಯ್ಯ ಆರೋಪಿಸಿದ್ದಾರೆ.

ಸ್ವಾಮೀಜಿಯ ವಿಡಿಯೊ ವೈರಲ್‌ ಆಗಿರುವ ಹಿನ್ನೆಲೆಯಲ್ಲಿ ಸ್ವಾಮೀಜಿ ವಿರುದ್ದ ಭಕ್ತರು ಮುನಿಸಿಕೊಂಡಿದ್ದು, ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೆ ವಿಡಿಯೊ ವೈರಲ್‌ ಆಗುತ್ತಿದ್ದಂತೆ ಸ್ವಾಮೀಜಿ ನನಗೆ ಜೀವ ಬೆದರಿಕೆ ಹಾಕಿರುವುದಾಗಿಯೂ ಚಾಲಕ ಆರೋಪಿಸಿದ್ದು, ಪೊಲೀಸರಿಗ ದೂರು ನೀಡಿದ್ದಾರೆ.

ಮಲ್ಲಯ್ಯನನ್ನು ಕೆಲಸದಿಂದ ಕಿತ್ತು ಹಾಕುವ ವಿಚಾರದಲ್ಲಿ ಸ್ವಾಮೀಜಿ ಹಾಗೂ ಮಲ್ಲಯ್ಯರ ಮಧ್ಯೆ ಕಿರಿಕ್‌ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ವಿಡಿಯೊ ಬಹಿರಂಗಗೊಂಡಿದೆ ಎಂದು ಹೇಳಲಾಗುತ್ತಿದೆ.

 

Leave a Reply

Your email address will not be published.