ಪ್ರೀತಿಗೆ ತಲೆಬಾಗಿ, ಅಭಿಮಾನಿಯ ಕೊನೆ ಆಸೆ ನೆರವೇರಿಸಿದ ಕಿಚ್ಚ

ಬೆಂಗಳೂರು : ತಾನು ತೆರೆಯ ಮೇಲೆ ಮಾತ್ರವಲ್ಲ ತೆರೆಯ ಹಿಂದೆಯೂ ಹೀರೋ ಎಂಬುದನ್ನು ಕಿಚ್ಚ ಸುದೀಪ್‌ ಸಾಬೀತು ಮಾಡುತ್ತಲೇ ಬಂದಿದ್ದಾರೆ. ತನ್ನ ಅಭಿಮಾನಿಯೊಬ್ಬರು ಸಾವಿನಂಚಿಲ್ಲಿರುವುದರ ಬಗ್ಗೆ ಮಾಹಿತಿ ಪಡೆದ ಕಿಚ್ಚ ಸುದೀಪ್‌ ಅಭಿಮಾನಿಯ ಕೊನೆಯ ಆಸೆಯನ್ನು ನೆರವೇರಿಸಿದ್ದಾರೆ.

ವಿನುತಾ ಎಂಬ ಮಹಿಳೆ ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿದ್ದಾರೆ. ಸದ್ಯ ಕ್ಯಾನ್ಸರ್‌ ಕೊನೆಯ ಸ್ಟೇಜ್‌ನಲ್ಲಿದ್ದು, ಆಕೆ ಸಾವಿಗೆ ದಿನಗಳನ್ನು ಎಣಿಸುತ್ತಿದ್ದಾರೆ. ಏನೇ ಮಾಡಿದರೂ ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ವೈದ್ಯರು ಹೇಳಿ ಕೈಚೆಲ್ಲಿದ್ದಾರೆ. ಆದರೆ ವಿನುತಾ ಕಿಚ್ಚ ಸುದೀಪರ ದೊಡ್ಡ ಅಭಿಮಾನಿ. ಆಕೆ ತಾನು ಒಂದು ಬಾರಿ ಸುದೀಪ್‌ರನ್ನು ನೋಡಬೇಕು. ಇದೇ ನನ್ನ ಕೊನೆಯ ಆಸೆ ಎಂದಿದ್ದರು.

ವಿನುತಾ ಆಸೆಯ ಬಗ್ಗೆ ಕಿಚ್ಚ ಸುದೀಪ್ ಸೇನಾ ಸಮಿತಿ (KSSS) ಸುದೀಪ್‌ಗೆ ವಿಷಯ ತಿಳಿಸಿತ್ತು. ವಿಷಯ ತಿಳಿದ ಕೂಡಲೆ ಸುದೀಪ್‌ ವಿನುತಾ ಅವರನ್ನು ಭೇಟಿ ಮಾಡಿದ್ದು, ಅವರ ಜೊತೆ ಸಮಯ ಕಳೆದಿದ್ದಾರೆ.

Leave a Reply

Your email address will not be published.