Hockey World League Final : ಬೆಲ್ಜಿಯಂ ತಂಡಕ್ಕೆ ಆಘಾತ : ಸೆಮೀಸ್ ತಲುಪಿದ ಭಾರತ

ಬುಧವಾರ ನಡೆದ ‘ಹಾಕಿ ವರ್ಲ್ಡ್ ಲೀಗ್ ಫೈನಲ್’ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬೆಲ್ಜಿಯಂ ತಂಡವನ್ನು ಮಣಿಸಿದ ಭಾರತ ಹಾಕಿ ಪುರುಷರ ತಂಡ, ಸೆಮಿಫೈನಲ್ ತಲುಪಿದೆ. ಪಂದ್ಯದ ನಿಗದಿತ ಅವಧಿ ಮುಗಿದ ನಂತರವೂ ಸ್ಕೋರ್ 3-3 ರಿಂದ ಸಮವಾಗಿದ್ದಾಗ ಶೂಟೌಟ್ ಮೂಲಕ ಫಲಿತಾಂಶ ನಿರ್ಧರಿಸಲಾಯಿತು. ಗೋಲ್ ಕೀಪರ್ ಅಶೋಕ್ ಚಿಕ್ಟೆ ತೋರಿದ ಅದ್ಭುತ ಪ್ರದರ್ಶನದ ದೆಸೆಯಿಂದ ಭಾರತ ಶೂಟೌಟ್ ನಲ್ಲಿ 3-2 ರಿಂದ ಜಯಿಸಿತು.

Image result for hockey world league belgium india

ಇದಕ್ಕೂ ಮುನ್ನ ಪಂದ್ಯದಲ್ಲಿ ಭಾರತದ ಪರವಾಗಿ ಗುರಜಂತ್ ಸಿಂಗ್ 31 ನೇ ನಿಮಿಷದಲ್ಲಿ, ಹರ್ಮನ್ ಪ್ರೀತ್ ಸಿಂಗ್ 35 ನೇ ನಿಮಿಷದಲ್ಲಿ, ರೂಪಿಂದರ್ ಪಾಲ್ ಸಿಂಗ್ 46ನೇ ನಿಮಿಷದಲ್ಲಿ ಗೋಲು ಬಾರಿಸಿದರು. ಬೆಲ್ಜಿಯಂ ಪರವಾಗಿ ಲಾಯಿಕ್ ಲುಪರ್ಟ್ 39 & 46ನೇ ನಿಮಿಷಗಳಲ್ಲಿ ಹಾಗೂ ಅಮೌರಿ ಕೆಸ್ಟರ್ಸ್ 53ನೇ ನಿಮಿಷದಲ್ಲಿ ಗೋಲ್ ದಾಖಲಿಸಿದರು.

Leave a Reply

Your email address will not be published.

Social Media Auto Publish Powered By : XYZScripts.com