ಮಾಜಿ ಶಾಸಕ ಶಿವರಾಮೇಗೌಡರ ಮಗಳ ಮದುವೆಗೆ ಮಂಡ್ಯದಿಂದ 214 KSRTC ಬಸ್‌ ಬುಕ್‌!!

ಮಂಡ್ಯ : ನಾಗ ಮಂಗಲ ಕ್ಷೇತ್ರದ ಮಾಜಿ ಶಾಸಕ ಶಿವರಾಮೇಗೌಡ ಅವರ ಮಗಳ ಮದುವೆ ಗುರುವಾರ ನಡೆಯಲಿದೆ.

ಬುಧವಾರ ಆರತಕ್ಷತೆ ಕಾರ್ಯಕ್ರಮ ನಡೆದಿದ್ದು, ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಶಿವರಾಮೇಗೌಡರ ಪುತ್ರಿ ಭವ್ಯ ಹಾಗೂ ರಾಜೀವ್‌ ಹಸೆಮಣೆ ಏರಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಡ್ಯದಿಂದ ಆಗಮಿಸುವವರಿಗೆ ತೊಂದರೆಯಾಗದಂತೆ ಒಟ್ಟು 216 ksrtc ಬಸ್‌ ಮಾಡಿಸಿದ್ದಾರೆ ಎನ್ನಲಾಗಿದೆ.

ನಾಗಮಂಗಲ, ಶಿವರಾಮೇಗೌಡರ ಕ್ಷೇತ್ರವಾಗಿದ್ದು, ಮಳವಳ್ಳಿ, ಪಾಂಡವಪುರ, ಕೆ.ಆರ್‌ ಪೇಟೆ, ಮದ್ದೂರು, ಚೆನ್ನರಾಯಪಟ್ಟಣ, ತುರುವೇಕೆರೆ ಡಿಪೋಗಳಿಂದ ಇಂದು ಮುಂಜಾನೆ ಐದು ಗಂಟೆಯಿಂದಲೇ ಬೆಂಗಳೂರಿನತ್ತ ಹೊರಟಿವೆ. ಬಸ್‌ಗಳಲ್ಲದೆ ಕಾರುಗಳಲ್ಲಿಯೂ ಸಾವಿರಾರು ಅಭಿಮಾನಿಗಳು ಆಗಮಿಸುತ್ತಿದ್ದಾರೆ.

ಏಕಕಾಲಕ್ಕೆ 214 ಬಸ್‌ ಬುಕ್‌ ಮಾಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗಿರುವುದಾಗಿ ಹೇಳಲಾಗುತ್ತಿದೆ.

ಈ ಹಿಂದೆ ಗಣಿಧಣಿ ಜನಾರ್ಧನ ರೆಡ್ಡಿ  ಅವರ ಮಗಳ ಮದುವೆಗೆಂದು ಮಾಡಿಸಿದ್ದ ರೀತಿಯ ಪತ್ರಿಕೆ, ಸ್ವಾಗತ ವಿಡಿಯೋ ಮಾಡಿಸಿದ್ದಾರೆ.

 

Leave a Reply

Your email address will not be published.