5 ವರ್ಷದ ಬಾಲಕಿಯನ್ನು ಬಾತ್ ಟಬ್ ನಲ್ಲಿ ಮುಳುಗಿಸಿ ಕೊಲೆಗೈದ ಕಿಡ್ನ್ಯಾಪರ್..!

ಹರ್ಯಾಣದಲ್ಲಿ 16 ವರ್ಷದ ಹುಡುಗನೊಬ್ಬ, ದುಡ್ಡಿಗಾಗಿ 5 ವರ್ಷದ ಬಾಲಕಿಯನ್ನು ಅಪಹರಿಸಿ ಬಾತ್ ಟಬ್ ನೀರಿನಲ್ಲಿ ಮುಳುಗಿಸಿ ಕೊಲೆಗೈದಿದ್ದಾನೆ. ನಂತರ ಬಾಲಕಿಯ ಶವವನ್ನು ವಾಟರ್ ಕೂಲರ್ ನಲ್ಲಿರಿಸಿದ್ದಾನೆ. ಗುರುವಾರ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಆತನನ್ನು ಸ್ಥಳೀಯ ಪೋಲೀಸರು ಬಂಧಿಸಿದ್ದಾರೆ.

ಬುಧವಾರ ಸಾಯಂಕಾಲ ಮನೆಯ ಮುಂದೆ ಆಡುತ್ತಿದ್ದ ಬಾಲಕಿಯನ್ನು ಅಪಹರಿಸಿದ್ದಾನೆ. ಎಷ್ಟು ಹೊತ್ತಾದರೂ ಬಾಲಕಿ ಮನೆಗೆ ಮರಳದ ಕಾರಣ ಕುಟುಂಬದವರು ಪೋಲೀಸರಿಗೆ ದೂರು ನೀಡಿದ್ದಾರೆ.

ಈ ನಡುವೆ ನೆರೆಮನೆಯವರಿಗೆ ದೂರವಾಣಿ ಕರೆ ಮಾಡಿದ ಕಿಡ್ನ್ಯಾಪರ್, 20 ಲಕ್ಷ ರೂಪಾಯಿಗಳ ಬೇಡಿಕೆಯಿಟ್ಟಿದ್ದಾನೆ. ಕರೆಯನ್ನು ಟ್ರೇಸ್ ಮಾಡಿ ಪೋಲೀಸರು ಆತನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

‘ ನಾವು ಬಂಧಿಸಿದಾಗ ಅವನಲ್ಲಿ ಯಾವುದೇ ಪಶ್ಚಾತ್ತಾಪವಿರಲಿಲ್ಲ. ಕೊಲೆಯ ಬಗ್ಗೆ ಪ್ರಶ್ನಿಸಿದಾಗ ಇಂಗ್ಲೀಷ್ ಸಿನೆಮಾ ವೊಂದನ್ನು ನೋಡಿ ಪ್ರೇರಿತನಾಗಿ, ಸರಳವಾಗಿ ದುಡ್ಡು ಗಳಿಸಲು ಈ ರೀತಿ ಮಾಡಿದ್ದೇನೆಂದು ಹೇಳಿದ. ಆತನನ್ನು ಬಂಧಿಸಲು ನಾವು ತೆರಳಿದಾಗ ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾಡುತ್ತಿದ್ದ ‘ ಎಂದು ಅಂಬಾಲಾದ ಎಸ್ ಪಿ ಅಭಿಷೇಕ್ ಜೋರ್ವಾಲ್ ಹೇಳಿದ್ದಾರೆ.

Leave a Reply

Your email address will not be published.

Social Media Auto Publish Powered By : XYZScripts.com