BIGGBOSS ಸುಂದರಿ ಸಂಜನಾಗೆ ಕೂಡಿಬಂತು ಕಂಕಣ ಭಾಗ್ಯ……..ವರನ್ಯಾರು ಗೊತ್ತೇ….?

ಬೆಂಗಳೂರು : ಬಿಗ್‌ಬಾಸ್ ಖ್ಯಾತಿಯ ನಟಿ ಸಂಜನಾಗೆ ಕಂಕಣಬಲ ಕೂಡಿ ಬಂದಿದೆ. ಬಿಗ್‌ಬಾಸ್‌ ಸೀಸನ್‌ 4 ರ ಸ್ಪರ್ಧಿಯಾಗಿದ್ದ ಸಂಜನಾ ಹಾಗೂ ಭುವನ್‌ ಮಧ್ಯೆ ಲವ್‌ ನಡೆಯುತ್ತಿದೆ. ಇಬ್ಬರೂ ಮದುವೆಯಾಗಲಿದ್ದಾರೆ ಎಂಬ ಊಹಾಪೋಹಗಳಿದ್ದು, ಇದಕ್ಕೆಲ್ಲ ಈಗ ತೆರೆ ಬಿದ್ದಿದೆ.

A post shared by Gourav Roy (@gourav_roy) on

ಸಂಜನಾ, ತಮ್ಮ ಬಹುಕಾಲದ ಗೆಳೆಯ ಗೌರವ್‌ ಅವರನ್ನು ವರಿಸಲಿದ್ದಾರಂತೆ. ಹೀಗಂತ ಸ್ವತಃ ಸಂಜನಾ ಹೇಳಿದ್ದಾರೆ. ಸದ್ಯದಲ್ಲೇ ನಮ್ಮಿಬ್ಬರ ನಿಶ್ಚಿತಾರ್ಥ ಸಹ ನಡೆಯಲಿದೆ ಎಂದು ಸಂಜನಾ ಹೇಳಿದ್ದಾರೆ. ಗೌರವ್‌ ರಾಯ್‌ ಮೂಲತಃ ಪಶ್ಚಿಮ ಬಂಗಾಳದವರಾಗಿದ್ದು, ಖಾಸಗಿ ವಾಹಿನಿಯೊಂದರಲ್ಲಿ ಮಾರ್ಕೆಟಿಂಗ್‌ ಎಕ್ಸಿಕ್ಯೂಟಿವ್ ಆಗೆ ಕೆಲಸ ನಿರ್ವಹಿಸುತ್ತಿದ್ದಾರೆ.

ಗೌರವ್‌ ನನಗೆ ಮೂರು  ವರ್ಷಗಳಿಂದ ಪರಿಚಯ. ಬಿಗ್‌ಬಾಸ್‌ ಮನೆಗೆ ಹೋಗುವ ಮುನ್ನ ತಮ್ಮ ಪ್ರೀತಿಯನ್ನು ನನಗೆ ಹೇಳಿದ್ದರು. ಬಿಗ್‌ಬಾಸ್‌ನಿಂದ ಬಂದ ಮೇಲೆ ಅವರ ಪ್ರೀತಿ ನಿಜ ಎನಿಸಿತು. ಅದಕ್ಕೆ ಒಪ್ಪಿಕೊಂಡೆ. ಈಗ ಇಬ್ಬರ ಮನೆಯಲ್ಲೂ ನಮ್ಮ ಮದುವೆಗೆ ಒಪ್ಪಿರುವುದಾಗಿ ಸಂಜನಾ ಹೇಳಿದ್ದಾರೆ.

A post shared by Gourav Roy (@gourav_roy) on

A post shared by Gourav Roy (@gourav_roy) on

 

Leave a Reply

Your email address will not be published.

Social Media Auto Publish Powered By : XYZScripts.com