ಅಮೆರಿಕದಲ್ಲಿ ಟೈಗರ್‌ ಶಾರ್ಕ್ ದಾಳಿಗೆ ಮಂಗಳೂರು ಮೂಲದ ಮಹಿಳೆ ಬಲಿ

ವಾಷಿಂಗ್ಟನ್‌ ; ಅಮೆರಿಕಾದ ಕೋಸ್ಟಾರಿಕಾ ದ್ವೀಪದಲ್ಲಿ ಟೈಗರ್‌ ಶಾರ್ಕ್‌ ನಡೆಸಿದ ದಾಳಿಗೆ ಮಂಗಳೂರು ಮೂವದ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ.  ಮೃತರನ್ನು ರೋಹಿನಾ ಭಂಡಾರಿ (49) ಎಂದು ಗುರುತಿಸಲಾಗಿದೆ.

ಅಮೆರಿಕದ ಮ್ಯಾನ್‌ ಹಟನ್‌ನಲ್ಲಿ ಫೈನಾನ್ಸ್‌ – ಬ್ಯುಸಿನೆಸ್‌ ಮ್ಯಾನೇಜ್‌ಮೆಂಟ್ ಪ್ರೊಫೆಶನಲ್‌ ಆಗಿ ಕೆಲಸ ಮಾಡುತ್ತಿದ್ದ ರೋಹಿನಾ , ಪೆಸಿಪಿಕ್‌ ಸಾಗರದ ಕೋಸ್ಟಾರಿಕಾ ದ್ವೀಪಕ್ಕೆ ವಿಹಾರಕ್ಕೆಂದು ತೆರಳಿದ್ದರು.

ಇವರು ತೆರಳುವ ಕೆಲ ಹೊತ್ತಿನ ಹಿಂದೆ ಮೂರು ಶಾರ್ಕ್‌ಗಳು ಕಂಡು ಬಂದಿದ್ದವು. ಈ ಹಿನ್ನೆಲೆಯಲ್ಲಿ ಶಾರ್ಕ್‌ಗಳು ಬಂದಿದ್ದ ಜಾಗವನ್ನು ಗುರು ಮಾಡಿ ಸ್ಕ್ಯೂಬಾ ಡೈವಿಂಗ್‌ಗೆ ನಿಷೇಧ ಹೇರಲಾಗಿತ್ತು. ಆದರೆ ರೋಹಿನಾ ಹಾಗೂ ಅವರ ಸ್ನೇಹಿತರು ನೀರಿಗಿಳಿದಿದ್ದು, ಈ ವೇಳೆ ಶಾರ್ಕ್‌ ಅಟ್ಯಾಕ್‌ ಮಾಡಿದೆ. ಗಂಭೀರವಾಗಿ ಗಾಯಗೊಂಡಿದ್ದ ಅವರಿಗೆ ಚಿಕಿತ್ಸೆ ನೀಡಲಾಯಿತಾದರೂ ಚಿಕಿತ್ಸೆ ಫಲಿಸದೆ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ ಇವರ ಜೊತೆಗಿದ್ದ ಡೈವ್‌ ಮಾಸ್ಟರ್‌ ಮೇಲೂ ಶಾರ್ಕ್ ದಾಳಿ ಮಾಡಿದ್ದು, ಅವರಿಗೆ ಚಿಕ್ಕಪುಟ್ಟ ಗಾಯಗಳಾಗಿರುವುದಾಗಿ ತಿಳಿದುಬಂದಿದೆ.

ಕೋಸ್ಟಾರಿಕಾ ದ್ವೀಪದಲ್ಲಿ ಶಾರ್ಕ್‌ ದಾಳಿ ನಡೆದಿರುವುದು ಇದೇ ಮೊದಲಬಾರಿ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published.