ಕನ್ನಡ ಮಾಧ್ಯಮ ಲೋಕಕ್ಕೆ ಹಿಂದೂಜಾ Entry : ಪ್ರಜಾಗೆ ಸಾಥ್ ನೀಡಿದ ಸಂಸ್ಥೆ…?

ಭಾರತದ ಬೃಹತ್ ಸಮೂಹ ಸಂಸ್ಥೆ ಹಿಂದೂಜಾ ಕನ್ನಡ ಮಾಧ್ಯಮ ಕ್ಷೇತ್ರಕ್ಕೆ ಕಾಲಿಡುವ ಮುನ್ಸೂಚನೆ ಸಿಕ್ಕಿದೆ. ಕನ್ನಡದ ಪ್ರಜಾ ಟಿವಿ ಜೊತೆ ಹಿಂದೂಜಾ ಸಂಸ್ಥೆ ಕೈಜೋಡಿಸಲು ಸಿದ್ಧವಾಗಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.

ಪ್ರಜಾ ಟಿವಿಯ ಎಂಡಿ ಆಗಿರುವ ರವಿಕುಮಾರ್‌ ಗೌಡ ಈ ಹಿಂದೆ ಹಿಂದೂಜಾದ ಭಾಗವಾಗಿರುವ  ಇನ್‌ಕೇಬರ್‌ ನೆಟ್‌ವರ್ಕ್‌ನಲ್ಲಿ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದು, ಅಂದಿನಿಂದಲೂ ಹಿಂದೂಜಾ ಸಂಸ್ಥೆ ಜೊತೆ ಒಡನಾಟ ಹೊಂದಿದ್ದರು. ಅಲ್ಲದೆ ಅಶೋಕ್‌ ಹಿಂದೂಜಾ ಅವರ ಜೊತೆಯೂ ಉತ್ತಮ ಬಾಂಧವ್ಯವಿದ್ದು, ಈ ಹಿನ್ನೆಲೆಯಲ್ಲಿ ಪ್ರಜಾ ಟಿವಿಗೆ ಬಂಡವಾಳ ಹೂಡಲು ಹಿಂದೂಜಾ ಸಂಸ್ಥೆ ಮುಂದೆ ಬಂದಿದೆ ಎನ್ನಲಾಗಿದೆ.

ಸದ್ಯ ಪ್ರಜಾ ಟಿವಿ ನ್ಯೂಸ್‌ ಮಾತ್ರ ಬಿತ್ತರಿಸುತ್ತಿದ್ದು, ಭವಿಷ್ಯದಲ್ಲಿ ಮನರಂಜನೆ, ಮ್ಯೂಸಿಕ್‌, ಸಿನಿಮಾ  ಚಾನಲ್‌ಗಳನ್ನೂ ಆರಂಭಿಸುತ್ತದೆ ಎನ್ನಲಾಗಿದೆ.

ಹಿಂದೂಜಾ ಸಂಸ್ಥೆ ಮಾರುಕಟ್ಟೆಯಲ್ಲಿ ಉತ್ತಮ ಹೆಸರು ಗಳಿಸಿದ್ದು, ಅಶೋಕ್‌ ಲೇಲ್ಯಾಂಡ್‌,  ಅಶೋಕ್‌ ಲೇ ಲ್ಯಾಂಡ್ ಡಿಫೆನ್ಸ್‌, ಆಯಿಲ್‌ ಕಾರ್ಪೋರೇಷನ್‌, ಬ್ಯಾಂಕ್ ಉದ್ಯಮ, ಗ್ಲೋಬಲ್‌ ಸೊಲ್ಯೂಷನ್‌, ಆಸ್ಪತ್ರೆ ….ಹೀಗೆ ಅಂತಾರಾಷ್ಚ್ರೀಯ ಮಟ್ಟದಲ್ಲಿ ತನ್ನ ಸಮೂಹ ಸಂಸ್ಥೆಗಳನ್ನು ಹೊಂದಿದೆ.

Leave a Reply

Your email address will not be published.

Social Media Auto Publish Powered By : XYZScripts.com