ದೆಹಲಿ : ಕಾರಿನಲ್ಲಿ ಹಾಕಿ ಆಟಗಾರ ರಿಜ್ವಾನ್ ಶವ ಪತ್ತೆ : ‘ಕೊಲೆ’ ಎಂದ ಕುಟುಂಬ

ದೆಹಲಿಯ ಸರೋಜಿನಿ ನಗರ ಪ್ರದೇಶದಲ್ಲಿ ಪಾರ್ಕ್ ಮಾಡಲಾಗಿದ್ದ ಕಾರಿನಲ್ಲಿ, ಮಂಗಳವಾರ ರಾಷ್ಟ್ರೀಯ ಮಟ್ಟದ ಹಾಕಿ ಆಟಗಾರ ರಿಜ್ವಾನ್ ಖಾನ್ ಶವ ಪತ್ತೆಯಾಗಿದೆ. ಪೋಲೀಸರು ಆತ್ಮಹತ್ಯೆ ಇರಬಹುದೆಂದು ಶಂಕಿಸಿದ್ದಾರೆ, ಆದರೆ ರಿಜ್ವಾನ್ ಪರಿವಾರದವರು ಕೊಲೆಯಾಗಿದೆ ಎಂದು ಆರೋಪಿಸಿದ್ದಾರೆ.

Image result for rizwan khan hockey dead

ಪೋಲೀಸ್ ಇಲಾಖೆಯ ಅಂದಾಜಿನ ಪ್ರಕಾರ ‘ ರಿಜ್ವಾನ್ ಹಾಕಿ ಆಟಗಾರ್ತಿಯಾಗಿದ್ದ ತನ್ನ ಗೆಳತಿಯ ಮನೆಗೆ ಹೋಗಿದ್ದಾರೆ. ಅಲ್ಲಿ ಆಕೆಯ ಕಸಿನ್ ಅನ್ನು ಭೇಟಿ ಮಾಡಿದ್ದಾರೆ. ನಂತರ 2 ಲಕ್ಷ ರೂಪಾಯಿಗಳನ್ನು ಇರಿಸಿದ್ದ ಬ್ಯಾಗ್ ಹಾಗೂ ಮೊಬೈಲ್ ಫೋನನ್ನು ಗೆಳತಿಯ ಮನೆಯಲ್ಲಿಯೇ ಬಿಟ್ಟು ಹೋಗಿದ್ದಾನೆ. 10.30 ರ ಸುಮಾರಿಗೆ, ಸ್ವಿಫ್ಟ್ ಕಾರಿನಲ್ಲಿ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ‘ ಎಂದಿದೆ. ಆದರೆ ರಿಜ್ವಾನ್ ಖಾನ್ ಪರಿವಾರ ಆತ್ಮಹತ್ಯೆಯನ್ನು ಅಲ್ಲಗಳೆದಿದ್ದು, ಕೊಲೆಯನ್ನು ಆರೋಪಿಸಿದೆ.

Image result for rizwan khan hockey dead

ದೆಹಲಿಯ ಸುಭಾಷ್ ನಗರದ ನಿವಾಸಿಯಾಗಿದ್ದ 22 ವರ್ಷದ ರಿಜ್ವಾನ್ ಖಾನ್, ಜಾಮಿಯಾ ಮಿಲಿಯಾ ಇಸ್ಲಾಮಿಯಾ ಕಾಲೇಜಿನಲ್ಲಿ 2ನೇ ವರ್ಷದ ಪದವಿ ಅಧ್ಯಯನ ಮಾಡುತ್ತಿದ್ದರು. ರಿಜ್ವಾನ್ 16 ವರ್ಷದೊಳಗಿನವರ ಹಾಕಿ ಟೂರ್ನಿಯಲ್ಲಿ ದೆಹಲಿ ತಂಡವನ್ನು ಪ್ರತಿನಿಧಿಸಿದ್ದರು.

Leave a Reply

Your email address will not be published.

Social Media Auto Publish Powered By : XYZScripts.com