ನಾನು ನಿಮ್ಮ ನರೇಂದ್ರ ಭಾಯ್‌ನಂತಲ್ಲ, ನಾನೊಬ್ಬ ಸಾಮಾನ್ಯ ಮನುಷ್ಯ : ರಾಹುಲ್‌ ಗಾಂಧಿ

ದೆಹಲಿ : ಪ್ರೀತಿಯ ಬಿಜೆಪಿ ಗೆಳೆಯರೇ ನಾನು ನರೇಂದ್ರ ಭಾಯ್‌ ನಂತಲ್ಲ. ನಾನೊಬ್ಬ ಸಾಮಾನ್ಯ ಮನುಷ್ಯ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ಟ್ಟೀಟ್‌ ಮಾಡಿದ್ದಾರೆ.

ಮಂಗಳವಾರವಷ್ಟೇ ಪ್ರಧಾನಿ ಮೋದಿಗೆ ಪ್ರಶ್ನೆ ಕೇಳುವ ಭರದಲ್ಲಿ ತಪ್ಪು ಮಾಹಿತಿಯುಳ್ಳು ಫೋಟೋವೊಂದನ್ನು ರಾಹುಲ್‌ ಅಪ್‌ಲೋಡ್‌ ಮಾಡಿದ್ದರು. ಅಲ್ಲದೆ ಇದಕ್ಕೆ ಸಾಕಷ್ಟು ಮಂದಿ ರಾಹುಲ್‌ ಗಾಂಧಿಯವರ ಕಾಲೆಳೆದಿದ್ದರು. ಬಳಿಕ ರಾಹುಲ್‌ ಆ ಫೋಟೋವನ್ನು ಡಿಲೀಟ್ ಮಾಡಿ ಸರಿಯಾದ ಅಂಕಿ -ಅಂಶಗಳುಳ್ಳ ಫೋಟೊವನ್ನು ಪೋಸ್ಟ್‌ ಮಾಡಿದ್ದರು.

ಈಗ ರಾಹುಲ್‌ ಮತ್ತೊಂದು ಟ್ವೀಟ್ ಮಾಡಿದ್ದು, ಪ್ರೀತಿಯ ಬಿಜೆಪಿ ಗೆಳೆಯರೇ… ನಾನು ನಿಮ್ಮ ನರೇಂದ್ರ ಭಾಯ್‌ನಂತಲ್ಲ. ನಾನೊಬ್ಬ ಸಾಮಾನ್ಯ ಮನುಷ್ಯ. ತಪ್ಪು ಮಾಡುವುದು ಸಹಜ. ನೀವು ನನ್ನ ತಪ್ಪುಗಳನ್ನು ಹೀಗೇ ತಿದ್ದುತ್ತಿರಿ.  ಇದರಿಂದ ನನಗೆ ನನ್ನನ್ನು ತಿದ್ದಿಕೊಳ್ಳಲು ಸಹಾಯವಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com