Cricket : ಡ್ರಾನಲ್ಲಿ ಅಂತ್ಯಗೊಂಡ 3ನೇ ಟೆಸ್ಟ್ : ಭಾರತಕ್ಕೆ ಸರಣಿ ಜಯ

ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವೆ ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ. ಈ ಮೂಲಕ 3 ಟೆಸ್ಟ್ ಪಂದ್ಯಗಳ ಸರಣಿಯನ್ನು ಭಾರತ 1-0 ಯಿಂದ ತನ್ನದಾಗಿಸಿಕೊಂಡಿದೆ.

5ನೇ ದಿನವಾದ ಬುಧವಾರ ಲಂಕಾ ಬ್ಯಾಟ್ಸಮನ್ ಗಳು ಪ್ರಬಲ ಹೋರಾಟ ನಡೆಸಿದರು. 410 ರನ್ ಗುರಿಯನ್ನು ಬೆನ್ನತ್ತಿದ ಲಂಕಾ, ಎರಡನೇ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಕಳೆದುಕೊಂಡು 299 ರನ್ ಗಳಿಸಿತು. ಲಂಕಾ ಪರವಾಗಿ ತಾಳ್ಮೆಯ ಶತಕ ದಾಖಲಿಸಿದ ಧನಂಜಯ ಡಿ ಸಿಲ್ವಾ 119 ರನ್ ಗಳಿಸಿದರು. ತಾಳ್ಮೆಯ ಬ್ಯಾಟಿಂಗ್ ನಡೆಸಿದ ರೋಶನ್ ಸಿಲ್ವಾ 74 ಹಾಗೂ ನಿರೋಶಾನ್ ಡಿಕ್ವೆಲಾ 44  ರನ್ ಗಳಿಸಿ ಲಂಕಾ ಸೋಲನ್ನು ತಪ್ಪಿಸಿದರು.

ಭಾರತದ ಪರವಾಗಿ ರವೀಂದ್ರ ಜಡೇಜಾ 3, ಆರ್ ಅಶ್ವಿನ್ 1 ಹಾಗೂ ಮಹಮ್ಮದ್ ಶಮಿ 1 ವಿಕೆಟ್ ಪಡೆದರು. ಸರಣಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದ ನಾಯಕ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಟ ಹಾಗೂ ಸರಣಿಶ್ರೇಷ್ಟ ಪ್ರಶಸ್ತಿಯನ್ನು ಪಡೆದರು.

Leave a Reply

Your email address will not be published.