ಇದೇ ತಿಂಗಳು ವಿರಾಟ್ – ಅನುಷ್ಕಾ ವಿವಾಹ..!? : ಮದುವೆ ಭಾರತದಲ್ಲಿ ಇಲ್ವಂತೆ..!
ಜಹೀರ್ ಖಾನ್ ಆಯ್ತು, ಭುವನೇಶ್ವರ್ ಕುಮಾರ್ ಆಯ್ತು, ಈಗ ಟೀಮ್ ಇಂಡಿಯಾ ಕ್ಯಾಪ್ಟನ್ ಸರದಿ. ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಈ ಡಿಸೆಂಬರ್ ತಿಂಗಳಲ್ಲಿಯೇ ವಿವಾಹವಾಗಲಿದ್ದರಂತೆ. ಇದೇ ತಿಂಗಳ 9 ರಿಂದ 12 ರ ನಡುವೆ, ಮದುವೆ ನಡೆಯಲಿದೆ ಎಂಬ ಸುದ್ದಿಯಿದೆ.
ವಿರಾಟ್ – ಅನುಷ್ಕಾ ಜೋಡಿಯ ಮದುವೆ, ಭಾರತದಲ್ಲಿ ಅಲ್ಲ ಬದಲಾಗಿ ಇಟಲಿಯಲ್ಲಿ ನಡೆಯಲಿದೆಯಂತೆ. ಮದುವೆಗಾಗಿ ವಿರಾಟ್ ಕೊಹ್ಲಿ ನಾಳೆಯೇ ಇಟಲಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂಬ ಸುದ್ದಿಯೂ ಇದೆ.
ವಿರುಷ್ಕಾ ಜೋಡಿಯ ಮದುವೆ ಸಂಪೂರ್ಣ ಇಟಾಲಿಯನ್ ಶೈಲಿಯಲ್ಲಿ ಜರುಗಲಿದೆಯಂತೆ. ಇಟಲಿಯ ಮಿಲಾನ್ ನಲ್ಲಿ ನಡೆಯಲಿರುವ ಈ ಮದುವೆಯಲ್ಲಿ ವಿರಾಟ್ ಕೊಹ್ಲಿ ಪರಿವಾರ ಹಾಗೂ ಆತ್ಮೀಯ ಸ್ನೇಹಿತರು ಮಾತ್ರ ಭಾಗವಹಿಸಲಿದ್ದಾರಂತೆ. ಟೀಮ್ ಇಂಡಿಯಾದ ಕ್ರಿಕೆಟಿಗರಿಗೂ ಸಹ ಆಹ್ವಾನ ನೀಡಲಾಗಿಲ್ಲ. ಡಿಸೆಂಬರ್ 21 ರಂದು ಮುಂಬೈನಲ್ಲಿ ರಿಸೆಪ್ಷನ್ ನಡೆಯಲಿದ್ದು ಅದಕ್ಕೆ ಅನುಷ್ಕಾ ಹಾಗೂ ವಿರಾಟ್ ಎಲ್ಲ ಸ್ನೇಹಿತರು ಆಗಮಿಸಲಿದ್ದಾರೆ.
ಮದುವೆಯಲ್ಲಿ ಅನುಷ್ಕಾ ಧರಿಸಲಿರುವ ವಧುವಿನ ದಿರಿಸನ್ನು ಫ್ಯಾಷನ್ ಡಿಸೈನರ್ ಸಬ್ಯಸಾಚಿ ಮುಖರ್ಜಿ ಡಿಸೈನ್ ಮಾಡಿದ್ದಾರಂತೆ. ಅನುಷ್ಕಾ ಶರ್ಮಾ ಅವರ ಮಾಧ್ಯಮ ವಕ್ತಾರ ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ.