ಕತ್ರಿನಾ ಕೈಫ್‌ ಕಣ್ಣೀರು ಹಾಕಿದ್ದಕ್ಕೆ ಸಲ್ಮಾನ್‌ ಖಾನ್ ಮಾಡಿದ್ದೇನು ನೋಡಿ….!

ಬಾಲಿವುಡ್‌ ಬೆಡಗಿ ಕತ್ರಿನಾ ಕೈಫ್‌ ಕಾರ್ಯಕ್ರಮವೊಂದರಲ್ಲಿ ಕಣ್ಣೀರಿಟ್ಟಿದ್ದಾರೆ. ಆಗ ಅವರನ್ನು ನಗಿಸಲು ಸಲ್ಮಾನ್‌ ಖಾನ್‌ ಪ್ಲಾನ್‌ ಮಾಡಿದ್ದು, ಸಲ್ಮಾನ್‌ ಮಾಡಿದ್ದನ್ನು ನೋಡಿ ಕತ್ರಿನಾ ಮುಖದಲ್ಲಿ ನಗು ಮೂಡಿದೆ. ಈಗ ಸಲ್ಮಾನ್‌ ಖಾನ್‌ ಕತ್ರಿನಾರನ್ನು ನಗಿಸಲು ಮಾಡಿದ ಗಿಮಿಕ್‌ ಎಲ್ಲರ ಗಮನ ಸೆಳೆದಿದೆ.

ಸಲ್ಮಾನ್‌ ಖಾನ್‌ ಹಾಗೂ ಕತ್ರಿನಾ ಕೈಫ್‌ ಟೈಗರ್‌ ಜಿಂದಾ ಹೈ ಸಿನಿಮಾ ಮಾಡುತ್ತಿದ್ದು, ಡಿಸೆಂಬರ್‌ 22 ರಂದು ಸಿನಿಮಾ ತೆರೆ ಕಾಣುತ್ತಿದೆ. ಈ ಚಿತ್ರದ ಪ್ರಚಾರಕ್ಕಾಗಿ ಕತ್ರಿನಾ ಕೈಫ್‌, ಸಲ್ಮಾನ್‌ ಖಾನ್‌, ಡಾನ್ಸ್‌ ಚಾಂಪಿಯನ್‌ ಎಂಬ ರಿಯಾಲಿಟಿ ಶೋ ಒಂದರ ತೀರ್ಪುಗಾರರಾಗಿ ಭಾಗಿಯಾಗಿದ್ದರು.

ಈ ವೇಳೆ ಸಲ್ಮಾನ್‌ ಖಾನ್‌ ಅವರ ತೇರಾ ನಾಮ್ ಚಿತ್ರದ ಟೈಟಲ್‌ ಸಾಂಗ್‌ಗೆ ತಡವೊಂದು ನೃತ್ಯ ಮಾಡಿತ್ತು. ಆಗ ಇದ್ದಕ್ಕಿದ್ದಂತೆ ಭಾವುಕರಾದ ಕತ್ರಿನಾ ಕಣ್ಣೀರಿಡಲು ಪ್ರಾರಂಭಿಸಿದರು. ಬಳಿಕ ಕತ್ರಿನಾರನ್ನು ನಗಿಸಲು ಸಲ್ಮಾನ್ ಖಾನ್‌ ಸುಲ್ತಾನ್‌ ಸಿನಿಮಾದ ಜಗ್‌ ಘುಮಾಯೆ ಹಾಡಿಗೆ ನೃತ್ಯ ಮಾಡಿದರು. ಆಡಾನ್ಸ್‌ ನೋಡುತ್ತಿದ್ದಂತೆಯೋ ಕತ್ರಿನಾ ನಗಲು ಆರಂಭಿಸಿದರು. ಬಳಿಕ ಕತ್ರಿನಾ ಸಲ್ಮಾನೆ ಜೊತೆಗೆ ಮೈನೆ ಪ್ಯಾರ್‌ ಕಿಯಾ ಚಿತ್ರದ ದಿಲ್‌ ದಿವಾನಾ ಹಾಡಿಗೆ ಡಾನ್ಸ್ ಮಾಡಿದ್ದು, ಸಲ್ಮಾನ್‌ ಖಾನ್‌ ಪ್ರಯತ್ನಕ್ಕೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

Leave a Reply

Your email address will not be published.

Social Media Auto Publish Powered By : XYZScripts.com