ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದ ಸನ್ನಿ ಇನ್ಮೇಲೆ ಹಾಟ್‌ ಆಗಿ ಕಾಣಿಸಿಕೊಳ್ಳಲ್ವಂತೆ…….ಯಾಕೆ…….?

ಬಾಲಿವುಡ್‌ ಮಾದಕ ನಟಿ ಸನ್ನಿ ಲಿಯೋನ್‌ ಇಷ್ಟು ದಿನ ಮಾದಕ ಪಾತ್ರಗಳಲ್ಲಿ ಅಭಿನಯಿಸಿ ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಿದ್ದರು. ಆದರೆ ಈಗ ಅದನ್ನು ಪಕ್ಕಕ್ಕೆ ಸರಿಸಿ ತಮಿಳಿನ ಐತಿಹಾಸಿಕ ಸಿನಿಮಾವೊಂದರಲ್ಲಿ ವೀರ ರಾಣಿಯಾಗಿ ಮಿಂಚಲಿದ್ದಾರೆ ಎಂದು ಬಾಲಿವುಡ್‌ ಅಂಗಳದಲ್ಲಿ ಮಾತುಗಳು ಕೇಳಿ ಬರುತ್ತಿವೆ.

ಸಿನಿಮಾಕ್ಕಾಗಿ ಭರ್ಜರಿ ತಯಾರಿ ನಡೆಸಿರುವ ಸನ್ನಿ ಲಿಯೋನ್‌, ಕತ್ತಿ ವರಸೆ, ಕುದುರೆ ಸವಾರಿಯ ತರಬೇತಿ ಪಡೆಯುತ್ತಿದ್ದಾರೆ. ಸಿನಿಮಾಗೆ ಇನ್ನು ಹೆಸರಿಟ್ಟಿಲ್ಲವಂತೆ. ಅಲ್ಲದೆ ಹೆಸರಿಡದ ಈ ಸಿನಿಮಾ ತೆಲುಗು, ಮಲೆಯಾಳಂ, ಹಿಂದಿಯಲ್ಲೂ ನಿರ್ಮಾಣವಾಗುತ್ತಿದೆ.

ಸಿನಿಮಾಕ್ಕೆ ವಿಸಿ ವಾದಿಉದಯನ್‌ ಅವರ ನಿರ್ದೇಶನವಿದ್ದು, ಐತಿಹಾಸಿಕ ಯುದ್ಧದ ಕಥೆಯುಳ್ಳ ಸಿನಿಮಾ ಇದಾಗಿದೆ. ಮಹಿಳಾ ಪ್ರಧಾನ ಪಾತ್ರದಲ್ಲಿ ಸನ್ನಿ ಲಿಯೋನ್ ಕಾಣಿಸಿಕೊಳ್ಳಲಿದ್ದು, ವಿಲನ್ ಪಾತ್ರದಲ್ಲಿ ನವದೀಪ್‌ ಅಭಿನಯಿಸಲಿದ್ದಾರೆ.

 

ತಮಿಳು ಸಿನಿಮಾಗಳು ಜಗತ್ತಿನಾದ್ಯಂತ ಅಭಿಮಾನಿಗಳ ಮನಸೂರೆಗೊಳ್ಳುತ್ತಿದೆ. ಆದ್ದರಿಂದ ಕೇವಲ ಭಾರತದಲ್ಲಿ ಮಾತ್ರವಲ್ಲ  ಅಂತಾರಾಷ್ಟ್ರೀಯ ಮಟ್ಟದಲ್ಲೂ ಜನಪ್ರಿಯತೆ ಪಡೆದಿರುವ ನಟಿಗಾಗಿ ಹುಡುಕಾಡುತ್ತಿದ್ದೆವು. ಆಗ ಸನ್ನಿ ಲಿಯೋನ್‌ ಈ ಪಾತ್ರಕ್ಕೆ ಸೂಕ್ತ ವ್ಯಕ್ತಿ ಎನಿಸಿತು. ಅದಕ್ಕಾಗಿ ಅವರನ್ನು ಆಯ್ಕೆ ಮಾಡಿರುವುದಾಗಿ ನಿರ್ದೇಶಕರು ಹೇಳಿದ್ದಾರೆ. ಅಲ್ಲದೆ ಸನ್ನಿ ಇನ್ಮುಂದೆ ಗ್ಲಾಮರಸ್‌ ಹಾಗೂ ಹಾಟ್‌ ಸಿನಿಮಾಗಳಲ್ಲಿ ಪಾತ್ರ ಮಾಡುವುದಿಲ್ಲ ಎಂದು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

Leave a Reply

Your email address will not be published.