ಪುರಾಣ ಎಂಬುದು ಒಂದು ಪುಂಡರ ಗೋಷ್ಠಿ : ನಿಜಗುಣಾನಂದ ಸ್ವಾಮೀಜಿ

21 ನೇ ಶತಮಾನದಲ್ಲಿ ಅಸ್ಪೃಶ್ಯತೆ ಇದೆ ಎಂಬುದು ಇವರಿಗೆ ಈಗ ಗೊತ್ತಾಗುತ್ತಿದೆ. ಈಗಲಾದರೂ ಗೊತ್ತಾಯಿತಲ್ಲ ಎಂಬುದೇ ನಮ್ಮ ಪುಣ್ಯ. ಈ ಹಿಂದೆ ಆರ್ಯ, ಬ್ರಾಹ್ಮಣ, ಪುರೋಹಿತ ಹೀಗೆ ನಮ್ಮ ಮೇಲೆ ಆಳ್ವಿಕೆ ಮಾಡಿದರು. ಇಂದು ಹಿಂದು ಎಂದುಕೊಂಡು, ದೇಶ, ರಾಷ್ಟ್ರೀಯತೆ, ಯುವ ಬ್ರಿಗೇಡ್‌ ಎಂಬ ಶಬ್ದಗಳನ್ನು ಬಳಸಿಕೊಂಡು ಆಳ್ವಿಕೆ ಮಾಡುತ್ತಿರುವುದಾಗಿ ನಿಜಗುಣಾನಂದ ಸ್ವಾಮೀಜಿ ಹೇಳಿದ್ದಾರೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಮೌಢ್ಯ ವಿರೋಧಿ ಸಂಕಲ್ು ದಿನಾಚರಣೆಯಲ್ಲಿ ಮಾತನಾಡಿದ ನಿಜಗುಣಾನಂದ ಸ್ವಾಮೀಜಿಗಳು, ಧರ್ಮ ಸಂಸತ್ತು ಚಾತುವರ್ಣ ಮತ್ತು ವೈದಿಕ ಸಂಸತ್ತು ಇದು. ಒಂದು ದೇವಸ್ಥಾನ ಕಟ್ಟಬೇಕಾದ್ರೆ ಎಲ್ಲರನ್ನೂ ಬಳಸಿಕೊಂಡು ಕೊನೆಗೆ ಆಚೆ ತಳ್ಳುತ್ತೀರಿ. ಕಾಣುವ ಮನಷ್ಯನನ್ನು ಪ್ರೀತಿ ಮಾಡದ ನೀವು, ಕಾಣದ ದೇವರನ್ನು ಪೂಜೆ ಮಾಡುತ್ತೀರಿ ಎಂದು ಗುಡುಗಿದ್ದಾರೆ.

ಈ ದೇಶದಲ್ಲಿ ಮಹಾಗ್ರಂಥಗಳನ್ನು ಬರೆದವರು ಕೆಳಜಾತಿಯವರು, ಆದ್ರೆ ನೀವು ಅವರನ್ನು ಕಡೆಗಣಿಸುತ್ತಿದ್ದೀರಿ. ಬಸವಣ್ಣನವರು ವಿಪ್ರರು ನುಡಿದಂತೆ ನಡೆಯರು ಎಂದು ಬರೆದರು. ನಿಜಕ್ಕೂ ಸರಿಯಾಗೇ ಬರೆದಿದ್ದಾರೆ ಎಂದಿದ್ದಾರೆ.

10 ಪೈಸೆಯ ದಾರ ಇಡೀ ದೇಶವನ್ನೇ ವಿಭಜನೆ ಮಾಡಿತ್ತು. ಜಾತಿ ಜಾತಿಗಳ ಮಧ್ಯೆ ಜಗಳ ಹೆಚ್ಚಿತ್ತು. ನೇಣು ಹಾಕಿಕೊಂಡರು ಸಾಯದಿರುವಂತಹ ದಾರ, ಜನರ ಪ್ರಾಣ ತೆಗೆಯಿತು. ನಮಗೆ ರಾಮರಾಜ್ಯ ಬೇಡ. ಕಲ್ಯಾಣ ರಾಜ್ಯ ಬೇಕು. ನಮ್ಮಲ್ಲಿ, ನಾಯಿ, ನರಿ, ಸಗಣಿ ಎಲ್ಲವೂ ದೇವರಾದವು ಆದರೆ ಮನುಷ್ಯ ಮಾತ್ರ ದೇವರಾಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪುರಾಣ ಎಂಬುದು ಒಂದು ಪುಂಡರ ಗೋಷ್ಛಿ ಎಂದಿರುವ ಸ್ವಾಮೀಜಿ. ಸತ್ತಾಗ ಪಿಂಡ ಇಡಿಸುತ್ತಾರೆ. ನನ್ನ ಜಾತಕದ ಪ್ರಕಾರ ಇಬ್ಬರು ಹೆಂಡತಿಯರು ಬರುತ್ತಾರೆ ಎಂದಿದ್ದರು. ಆದರೆ ಒಬ್ಬರೂ ಬರಲಿಲ್ಲ ಎಂದು ತೇರೇ ಮೇರೆ ಬೀಚ್‌ ಮೇ ಎಂದು ಹಾಡಿ ಜನರನ್ನು ನಗೆಗಡಲಲ್ಲಿ ತೇಲಿಸಿದರು. ಇದೇ ವೇಳೆ ಪಂಚಾಂಗ ಹೇಳುವವರನ್ನು ಮಾನಸಿಕ ಭಯೋತ್ಪಾದಕರು ಎಂದಿರುವ ಅವರು, ಶಂಕರಾಚಾರ್ಯಯ ವೇದ ಪುರಾಣದಿಂದ ನಮಗೆ ನ್ಯಾಯ ಸಿಕ್ಕಿಲ್ಲ. ಅಂಬೇಡ್ಕರ್‌ ಅವರ ಸಂವಿಧಾನದಿಂದ ನ್ಯಾಯ ಸಿಕ್ಕಿದೆ ಎಂದಿದ್ದಾರೆ.

 

 

Leave a Reply

Your email address will not be published.

Social Media Auto Publish Powered By : XYZScripts.com