ಗೌರಿ ಲಂಕೇಶ್‌ ಹತ್ಯೆ ಪ್ರಕರಣ : ಶಾರ್ಪ್‌ ಶೂಟರ್ ಬಂಧನ

ಬೆಂಗಳೂರು : ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣ ಸಂಬಂಧ ಭೂಗತ ಪಾತಕಿ ರವಿ ಪೂಜಾರಿ ಗ್ಯಾಂಗ್‌ನ ಶಾರ್ಪ್‌ ಶೂಟರ್‌ ತಾಹಿರ್‌ ಹುಸೇನ್‌ ನನ್ನು ಎಸ್‌ಐಟಿ ತಂಡ ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದೆ.

ರಾಜ್ಯದಲ್ಲಿ ನಾಡಪಿಸ್ತೂಲ್‌ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ  ಹುಸೇನ್‌ನನ್ನು ಬಂಧಿಸಿದ್ದು, ಆರೋಪಿ ಬಳಿ 7.65 ಎಂಎಂನ ನಾಡಪಿಸ್ತೂಲ್‌  ಹಾಗೂ 3 ಜೀವಂತ ಗುಂಡುಗಳು ಪತ್ತೆಯಾಗಿದೆ.

ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಗೂ ಇದೇ ಮಾದರಿಯ ಪಿಸ್ತೂಲ್‌ ಬಳಕೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಗೌರಿ ಹತ್ಯೆಯ ತನಿಖೆ ನಡೆಸುತ್ತಿರುವ ಎಸ್‌ಐಟಿ ತಂಡ ಹುಸೇನ್‌ನನ್ನು ವಶಪಡಿಸಿಕೊಂಡು ವಿಚಾರಣೆ ನಡೆಸುತ್ತಿದೆ.

ಈ ಹಿಂದೆ 2017ರ ಫೆಬ್ರವರಿಯಲ್ಲಿ ತಾಹೀರ್‌ನ ಬಿಡುಗಡೆಯಾಗಿತ್ತು. ಬಳಿಕ ಮತ್ತೆ ಈತ ಶಸ್ತ್ರಾಸ್ತ್ರಗಳ ಸಮೇತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

 

Leave a Reply

Your email address will not be published.