ಏಸು, ಪೈಗಂಬರ್ ಹುಟ್ಟಿಗೆ ದಾಖಲೆ ಇದೆ, ರಾಮನ ಹುಟ್ಟಿಗೆ ಮಾತ್ರ ಇಲ್ಲವಾ..? : ಶೋಭಾ ಕರಂದ್ಲಾಜೆ

ಬೆಂಗಳೂರು : ಏಸುಕ್ರಿಸ್ತ ಹುಟ್ಟಿದ್ದು, ಪೈಗಂಬರ್‌ ಹುಟ್ಟಿದ್ದಕ್ಕೆ ದಾಖಲೆಗಳಿವೆ. ಆದರೆ ರಾಮ ಹುಟ್ಟಿದ್ದಕ್ಕೆ ಮಾತ್ರ ದಾಖಲೆಗಳಿಲ್ಲವಾ ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ.

ಮಂಗಳೂರಿನಲ್ಲಿ  ದ್ವಾರಕಾನಾಥ್‌ ಅವರು ಬಾಬ್ರಿ ಮಸೀದಿ ಧ್ವಂಸ ವಿಚಾರ ಕುರಿತಂತೆ ಮಾತನಾಡುವ ವೇಳೆ  ಏಸುಕ್ರಿಸ್ತ, ಪೈಗಂಬರ್‌ ಹುಟ್ಟಿದ್ದಕ್ಕೆ ದಾಖಲೆಗಳಿವೆ. ಆದರೆ ರಾಮ ಹುಟ್ಟಿದ್ದರ ಬಗ್ಗೆ ಯಾವುದೇ ದಾಖಲೆ ಇಲ್ಲ ಎಂದಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಶೋಭಾ, ದ್ವಾರಕಾನಾಥ್‌ ಎಷ್ಟು ಪುರಾಣ ಓದಿದ್ದಾರೋ ಗೊತ್ತಿಲ್ಲ. ಓದಿ ಎಂದೂ ನಾನು ಹೇಳಲ್ಲ. ದ್ವಾರಕಾನಾಥ್ ಹೇಳಿಕೆ ದೇಶಕ್ಕೆ ಮಾಡೋ ಘೋರ ಅವಮಾನ ಎಂದಿದ್ದಾರೆ.

ಹಿಂದೆ ರಾಮ ಸೇತು ಇಲ್ಲ ಎಂದಿದ್ದರು. ಆದರೆ ಉತ್ಖನನ ಮಾಡಿದಾಗ ಸೇತುವೆ ಇದೆ ಎಂಬುದು ಗೊತ್ತಾಯಿತು. ದ್ವಾರಕಾನಾಥ್ ಬುದ್ದಿಜೀವಿಗಳಾಗಿದ್ದರೆ ಅಧ್ಯಯನ ಮಾಡಬೇಕಿತ್ತು. ನಮ್ಮ ದೇಶಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಈ ದೇಶದ ಧರ್ಮ ಹಾಗೂ ದೇಶದ ಇತಿಹಾಸವನ್ನು ನಾವು ನಂಬುತ್ತೇವೆ. ದ್ವಾರಕಾನಾಥ್ ಹೇಳಿಕೆಯನ್ನು ಕೇವಲ ಸಿದ್ದರಾಮಯ್ಯ ಮಾತ್ರ ಮೆಚ್ಚಬಹುದು. ಆದರೆ ರಾಜ್ಯದ ಜನ ಮೆಚ್ಚಲ್ಲ ಎಂದಿದ್ದಾರೆ.

 

Leave a Reply

Your email address will not be published.